ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭೂಮಿಗೆ ಬಹುತೇಕ ಗೋಚರಿಸದ ಚಂದ್ರನ ಭಾಗದಲ್ಲಿ ಯಶಸ್ವಿಯಾಗಿ ಇಳಿದ ಚೀನಾದ ಚಾಂಗ್‌ ಇ–6

ಭೂಮಿಗೆ ಬಹುತೇಕ ಗೋಚರಿಸದ ಚಂದ್ರನ ಭಾಗವನ್ನು ಚೀನಾದ ಬಾಹ್ಯಾಕಾಶ ನೌಕೆಯೊಂದು ಭಾನುವಾರ ಸ್ಪರ್ಶಿಸಿದೆ.
Published 2 ಜೂನ್ 2024, 15:56 IST
Last Updated 2 ಜೂನ್ 2024, 15:56 IST
ಅಕ್ಷರ ಗಾತ್ರ

ಬೀಜಿಂಗ್‌: ಭೂಮಿಗೆ ಬಹುತೇಕ ಗೋಚರಿಸದ ಚಂದ್ರನ ಭಾಗವನ್ನು ಚೀನಾದ ಬಾಹ್ಯಾಕಾಶ ನೌಕೆಯೊಂದು ಭಾನುವಾರ ಸ್ಪರ್ಶಿಸಿದೆ.

‘ಮುಂಜಾನೆ 3:53ರ ವೇಳೆಗೆ ಚಾಂಗ್‌ ಇ– 6 ನೌಕೆಯು ಚಂದ್ರನ ದಕ್ಷಿಣ ಧ್ರುವ ಐಟ್ಕೆನ್‌ನಲ್ಲಿ ಯಶ್ವಸಿಯಾಗಿ ಇಳಿದಿದೆ. ಈ ಭಾಗದಲ್ಲಿ ನೌಕೆಯನ್ನು ಇಳಿಸಿದ ಮೊದಲ ದೇಶ ನಮ್ಮದು’ ಎಂದು ಚೀನಾದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ (ಸಿಎನ್‌ಎಸ್‌ಎ) ತಿಳಿಸಿದೆ.

‘ಭೂಮಿಗೆ ಬಹುತೇಕ ಗೋಚರಿಸದ ಚಂದ್ರನ ಭಾಗದಿಂದ ಮಾದರಿಗಳನ್ನು ಸಂಗ್ರಹಿಸುವ ಉದ್ದೇಶದಿಂದ ಮೇ 3ರಂದು ನೌಕೆಯನ್ನು ಉಡಾವಣೆ ಮಾಡಲಾಗಿತ್ತು. ಎರಡು ದಿನಗಳಲ್ಲಿ ಲ್ಯಾಂಡರ್‌ನಲ್ಲಿನ ಉಪಕರಣಗಳು ಮಾದರಿಗಳನ್ನು ಸಂಗ್ರಹಿಸಲಿವೆ’ ಎಂದು ಸಿಎನ್‌ಎಸ್‌ಎ ತಿಳಿಸಿದೆ. 

‘ಫ್ರಾನ್ಸ್‌, ಇಟಲಿ ಮತ್ತು ಯೂರೋಪ್‌ ಬಾಹ್ಯಾಕಾಶ ಸಂಸ್ಥೆಗಳ ವೈಜ್ಞಾನಿಕ ಉಪಕರಣಗಳನ್ನು ಚಾಂಗ್‌ ಇ– 6ನ ಲ್ಯಾಂಡರ್‌ನಲ್ಲಿ ಅಳವಡಿಸಲಾಗಿದ್ದು, ಆರ್ಬಿಟರ್‌ನಲ್ಲಿ  ಪಾಕಿಸ್ತಾನದ ಪೆಲ್ಲೋಡ್‌ ಕೂಡ ಇದೆ’ ಎಂದು ಸಿಎನ್‌ಎಸ್‌ಎ ಮಾಹಿತಿ ನೀಡಿದೆ.

ಲೂನಾರ್‌ ದಕ್ಷಿಣ ಧ್ರುವದಲ್ಲಿ ಮೊದಲ ಬಾರಿಗೆ ನೌಕೆಯನ್ನು ಬಾಹ್ಯಾಕಾಶ ಇಳಿಸಿದ ಖ್ಯಾತಿ ಭಾರತದ ಪಾಲಿಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT