ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ಉದ್ವಿಗ್ನ ಸ್ಥಿತಿ ಇತಿಹಾಸದಿಂದ ಉಳಿದು ಬಂದದ್ದು: ಚೀನಾ

Published 25 ಜನವರಿ 2024, 15:54 IST
Last Updated 25 ಜನವರಿ 2024, 15:54 IST
ಅಕ್ಷರ ಗಾತ್ರ

ಬೀಜಿಂಗ್: ಭಾರತ–ಚೀನಾ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ಪರಂಪರಾಗತವಾಗಿ ಉಳಿದುಕೊಂಡು ಬಂದಿದೆಯೇ ಹೊರತು ಚೀನಾ–ಭಾರತದ ಒಟ್ಟು ಬಾಂಧವ್ಯದಿಂದ ಮೂಡಿರುವಂತಹದ್ದಲ್ಲ ಎಂದು ಚೀನಾ ರಕ್ಷಣಾ ಸಚಿವಾಲಯದ ವಕ್ತಾರ ವು ಒಯಿಯಾನ್ ಹೇಳಿದ್ದಾರೆ.

ಗಡಿ ಸ್ಥಿತಿಯನ್ನು ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧದ ಜೊತೆಗೆ ಭಾರತವು ತಳುಕು ಹಾಕುವುದು ಅವಿವೇಕ ಹಾಗೂ ಅನುಚಿತ ಎಂದು ಅವರು ಗುರುವಾರ ಅಭಿಪ್ರಾಯಪಟ್ಟಿದ್ದಾರೆ.

‘ಗಡಿಯಲ್ಲಿ ಪರಿಸ್ಥಿತಿ ಶಾಂತವಾದಲ್ಲಿ, ಚೀನಾ ಕುರಿತು ಬಂಡವಾಳ ಹೂಡಿಕೆ ವಿಷಯದಲ್ಲಿ ನಾವು ಜಾರಿಗೊಳಿಸಿರುವ ಕಠಿಣ ಪರಿಶೀಲನಾ ಕ್ರಮವನ್ನು ಸಡಿಲಿಸಬಹುದು‘ ಎಂದು ಈ ತಿಂಗಳ ಪ್ರಾರಂಭದಲ್ಲಿ ಭಾರತದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಾತ್ಮಕವಾಗಿ ವು ಒಯಿಯಾನ್ ಈ ರೀತಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT