ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್, ಅಮೆರಿಕ ಹಡಗುಗಳಿಗೆ ಹಾಕಿದ್ದ ಬಲೆ ಚೀನಾಗೆ ಮುಳುವಾಯ್ತು: 50 ಮಂದಿ ಸಾವು

Published 4 ಅಕ್ಟೋಬರ್ 2023, 10:54 IST
Last Updated 4 ಅಕ್ಟೋಬರ್ 2023, 10:54 IST
ಅಕ್ಷರ ಗಾತ್ರ

ನವದೆಹಲಿ: ಹಳದಿ ಸಮುದ್ರದಲ್ಲಿ ಚೀನಾದ ಜಲಾಂತರ್ಗಾಮಿ ನೌಕೆ ಮುಳುಗಡೆಯಾದ ಪರಿಣಾಮ 55 ನಾವಿಕರು ಮೃತಪಟ್ಟಿದ್ದಾರೆ ಎಂದು ಬ್ರಿಟನ್ ಮೂಲದ ‘ದಿ ಟೈಮ್ಸ್’ ಸೋರಿಕೆಯಾದ ಗುಪ್ತಚರ ವರದಿಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

ಶಾಂಘೈನ ಉತ್ತರದ ಶಾಂಡೋಂಗ್ ಪ್ರಾಂತ್ಯದ ಬಳಿ ಹಳದಿ ಸಮುದ್ರದಲ್ಲಿ ವಿದೇಶಿ ಹಡಗುಗಳಿಗಾಗಿ ಹಾಕಲಾಗಿದ್ದ ಬಲೆಯಲ್ಲಿ ಚೀನಾದ ಪರಮಾಣು ಜಲಾಂತರ್ಗಾಮಿ ನೌಕೆ ಸಿಕ್ಕಿಬಿದ್ದಿದೆ. ಈ ನೌಕೆಯನ್ನು ಹಳದಿ ಸಮುದ್ರದಲ್ಲಿ ಬ್ರಿಟನ್ ಮತ್ತು ಅಮೆರಿಕ ಹಡಗುಗಳನ್ನು ಹಿಡಿಯುವ ಉದ್ದೇಶದಿಂದ ನಿರ್ಮಿಸಲಾಗಿತ್ತು ಎಂದು ತಿಳಿದು ಬಂದಿದೆ.

ಆಗಸ್ಟ್ 21ರಂದು ಈ ದುರಂತ ಸಂಭವಿಸಿದ್ದು, ಚೀನಾದ ಪಿಎಲ್‌ಎ ನೌಕಾಪಡೆಯ ಜಲಾಂತರ್ಗಾಮಿ ‘093-417’ ಕ್ಯಾಪ್ಟನ್ ಮತ್ತು 21 ಅಧಿಕಾರಿಗಳು ಸಹ ಸತ್ತವರಲ್ಲಿದ್ದಾರೆ ಎಂದು ಹೇಳಲಾಗಿದೆ. ಈ ಘಟನೆ ಸಂಬಂಧ ಚೀನಾ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಜಲಾಂತರ್ಗಾಮಿ ನೌಕೆಯ ಆಮ್ಲಜನಕ ವ್ಯವಸ್ಥೆಯ ವೈಫಲ್ಯದಿಂದ ಘಟನೆ ನಡೆದಿದೆ. ಉಸಿರಾಡಲು ಸೂಕ್ತ ಗಾಳಿ ಇಲ್ಲದೇ ಸಿಬ್ಬಂದಿ ಸಾವಿಗೀಡಾಗಿರುವುದಾಗಿ ಯುಕೆ ಗುಪ್ತಚರ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT