ಬೀಜಿಂಗ್: ಚಂಡಮಾರುತ (ಟೈಫೂನ್) ‘ತಾಲೀಮ್’ ಮಂಗಳವಾರ ಮುಂಜಾನೆ 90 ಕಿಲೊ ಮೀಟರ್ ವೇಗದಲ್ಲಿ ದಕ್ಷಿಣ ಚೀನಾದ ಬೈಹೈ ಮತ್ತು ಗೌಂಗ್ಸಿ ಪ್ರದೇಶಕ್ಕೆ ಅಪ್ಪಳಿಸಿದೆ.

ಚಂಡಮಾರುತದಿಂದಾಗಿ ಮರಗಳು ಧರೆಗುರುಳಿದ್ದು, ಹಲವಾರು ವಾಹನಗಳು ಹಾನಿಗೀಡಾಗಿವೆ. ಫಂಗ್ಚೆಂಗಾಂಗ್ ಮತ್ತು ಬೈಹೈನ ಸ್ಥಳಿಯಾಡಳಿತಗಳು ಶಾಲೆಗಳಿಗೆ ರಜೆ ಘೋಷಣೆ ಮಾಡಿವೆ. ನಿರ್ಮಾಣ ಕಾಮಗಾರಿಗಳು, ಸಾರಿಗೆ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ.

ನನ್ನಿಂಗ್ ನಗರದಲ್ಲಿ ಭಾರಿ ಬಿರುಗಾಳಿ ಮಳೆಯಾಗುತ್ತಿದ್ದು, 69 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. 12 ರೈಲುಗಳ ಮಾರ್ಗವನ್ನು ಬದಲಿಸಲಾಗಿದೆ.

ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಚಂಡಮಾರುತ ದುರ್ಬಲಗೊಂಡಿದ್ದು, ಜನರು ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ. ಆದರೆ, ದಕ್ಷಿಣ ಚೀನಾದಲ್ಲಿ ಭಾರಿ ಮಳೆ–ಬಿರುಗಾಳಿ ಮುಂದುವವರಿಯಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.