ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತಾರ್: ತಾಲಿಬಾನ್ ರಾಜಕೀಯ ಕಚೇರಿ ಮುಖ್ಯಸ್ಥನಾಗಿ ಬರಾದರ್ ನೇಮಕ

Last Updated 25 ಜನವರಿ 2019, 10:10 IST
ಅಕ್ಷರ ಗಾತ್ರ

ಕಾಬುಲ್‌: ಕತಾರ್‌ನಲ್ಲಿರುವ ತಾಲಿಬಾನ್‌ ಸಂಘಟನೆಯ ರಾಜಕೀಯ ಕಚೇರಿ ಮುಖ್ಯಸ್ಥನಾಗಿ ಮುಲ್ಲಾ ಅಬ್ದುಲ್‌ ಘನಿ ಬರಾದರ್‌ನನ್ನು ಗುರುವಾರ ನೇಮಕ ಮಾಡಲಾಗಿದೆ. ಈ ಮೂಲಕ ಅಮೆರಿಕ ಜತೆಗಿನ ಶಾಂತಿ ಮಾತುಕತೆಗೆ ಬಲ ತುಂಬಲು ಸಂಘಟನೆ ನಿರ್ಧರಿಸಿದೆ.

ಪಾಕಿಸ್ತಾನದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಮುಲ್ಲಾ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಿದ್ದ. ಆತನನ್ನು ರಾಜಕೀಯ ಮುಖಂಡನನ್ನಾಗಿ ನೇಮಕ ಮಾಡಿರುವ ಬಗ್ಗೆ ಸಂಘಟನೆಯ ಉನ್ನತ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

‘ಅಮೆರಿಕ ಜತೆಗೆನಡೆಯಲಿರುವ ಮಾತುಕತೆಯನ್ನು ಸಮರ್ಥವಾಗಿ ನಿಭಾಯಿಸಲು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ’ ಎಂದು ತಾಲಿಬಾನ್‌ ಸಂಘಟನೆ ಹೇಳಿಕೆ ಬಿಡುಗಡೆ ಮಾಡಿದೆ.

ತಾಲಿಬಾನ್ ಪ್ರತಿನಿಧಿಗಳೊಂದಿಗೆ ಎರಡು ದಿನಗಳಿಂದಅಮೆರಿಕದ ಪ್ರತಿನಿಧಿ ಝಾಲ್ಮೆ ಖಲೀಲ್‌ಜಾದ್ ಅವರು ಮಾತುಕತೆ ನಡೆಸಿದ್ದಾರೆ. ಮಾತುಕತೆ ಮುಂದುವರಿಯುವ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ‘ಬರಾದರ್‌ ಕೂಡಲೇ ಕತಾರ್‌ಗೆ ತೆರಳಲಿದ್ದಾರೆ. ಶಾಂತಿ ಮಾತುಕತೆಯಲ್ಲಿ ಸಂಘಟನೆಯ ಹಿರಿಯ ನಾಯಕರು ಭಾಗವಹಿಸುವುದನ್ನು ಅಮೆರಿಕವು ಬಯಸಿದ್ದರಿಂದಲೇ ಬರಾದರ್‌ ನೇಮಕ ಮಾಡಲಾಗಿದೆ’ ಎಂದು ಮೂಲಗಳಿಂದ ತಿಳಿದುಬಂದಿದೆ.

ಆಫ್ಗಾನಿಸ್ತಾನದ ದಕ್ಷಿಣ ಪ್ರಾಂತ್ಯಗಳಲ್ಲಿ ಬಂಡುಕೋರರ ಗುಂಪಿನೊಡನೆ ಮಿಲಿಟರಿ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದ ಬರಾದರ್‌ನನ್ನು ಐಎಸ್‌ಐ ಹಾಗೂ ಅಮೆರಿಕ ಕೇಂದ್ರೀಯ ತನಿಕಾ ಸಂಸ್ಥೆ 2010ರಲ್ಲಿ ಬಂಧಿಸಿದ್ದವು. ತಾಲಿಬಾನ್‌ ಹಾಗೂಖಲೀಲ್‌ಜಾದ್ ನಡುವೆ ಉನ್ನತ ಮಟ್ಟದ ಮಾತುಕತೆ ಬಳಿಕ ಆತನನ್ನುಕಳೆದ ವರ್ಷ ಬಿಡುಗಡೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT