ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛತ್ತೀಸ್‌ಗಢ ಕಲ್ಲಿದ್ದಲು ಹಗರಣ: ₹17.48 ಕೋಟಿ ಮೌಲ್ಯದ ಬೇನಾಮಿ ಆಸ್ತಿ ಮುಟ್ಟುಗೋಲು

Last Updated 31 ಜನವರಿ 2023, 9:24 IST
ಅಕ್ಷರ ಗಾತ್ರ

ರಾಯಪುರ: ಛತ್ತೀಸ್‌ಗಢದ ಕಲ್ಲಿದ್ದಲು ತೆರಿಗೆ ಗರಣದ ಆರೋಪಿ ಹಾಗೂ ಮುಖ್ಯಮಂತ್ರಿಗಳ ಕಚೇರಿಯ ಮಾಜಿ ಕಾರ್ಯದರ್ಶಿ ಸೌಮ್ಯಾ ಚೌರಾಸಿಯಾ ಮತ್ತು ಕಲ್ಲಿದ್ದಲು ವ್ಯಾಪಾರಿ ಸೂರ್ಯಕಾಂತ್ ತಿವಾರಿ ಅವರಿಗೆ ಸೇರಿದ ₹17.48 ಕೋಟಿ ಮೌಲ್ಯದ ಬೇನಾಮಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ(ಇ.ಡಿ) ಹೇಳಿದೆ.

ಮುಟ್ಟುಗೋಲು ಹಾಕಿಕೊಂಡ 51 ಆಸ್ತಿಗಳ ಪೈಕಿ ₹7.57 ಕೋಟಿ ಮೌಲ್ಯದ 8 ಬೇನಾಮಿ ಆಸ್ತಿ ಸೌಮ್ಯಾ ಅವರಿಗೆ ಸೇರಿದ್ದು, ಉಳಿದದ್ದು ಪ್ರಕರಣದ ಕಿಂಗ್ ಪಿನ್ ಸೂರ್ಯಕಾಂತ್ ಅವರಿಗೆ ಸೇರಿದ್ದಾಗಿದೆ ಎಂದು ಇ.ಡಿ ಹೇಳಿದೆ.

ಕಳೆದ ವರ್ಷವೂ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿ ಇ.ಡಿ ಇಬ್ಬರು ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಂಡಿತ್ತು. ಈ ಪ್ರಕರಣದಲ್ಲಿ ಈವರೆಗೆ ವಶಕ್ಕೆ ಪಡೆದ ಒಟ್ಟು ಆಸ್ತಿ ಮೌಲ್ಯ ₹170 ಕೋಟಿ ಆಗಿದೆ.

ಛತ್ತೀಸ್‌ಗಢದಿಂದ ಸಾಗಿಸಲಾದ ಪ್ರತಿ ಟನ್ ಕಲ್ಲಿದ್ದಲಿಗೆ ಹಿರಿಯ ಅಧಿಕಾರಿಗಳು, ಉದ್ಯಮಿಗಳು, ರಾಜಕಾರಣಿಗಳು ಮತ್ತು ಮಧ್ಯವರ್ತಿಗಳನ್ನು ಒಳಗೊಂಡ ಗುಂಪಿನಿಂದ ಅಕ್ರಮವಾಗಿ ₹25 ಶುಲ್ಕ ವಸೂಲಿಗೆ ಸಂಬಂಧಿಸಿದ ಬೃಹತ್ ಹಗರಣ ಇದಾಗಿದ್ದು, ಈ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಚೌರಾಸಿಯಾ, ತಿವಾರಿ, ಅವರ ಚಿಕ್ಕಪ್ಪ ಲಕ್ಷ್ಮೀಕಾಂತ್, ಐಎಎಸ್ ಅಧಿಕಾರಿ ಸಮೀರ್ ವಿಷ್ಣೋಯಿ, ಮತ್ತೊಬ್ಬ ಕಲ್ಲಿದ್ದಲು ವ್ಯಾಪಾರಿ ಸುನಿಲ್ ಅಗರ್‌ವಾಲ್ ಸೇರಿ 9 ಮಂದಿಯನ್ನು ಕಳೆದ ವರ್ಷ ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT