ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮೆಡ್-ಕೆ ಫಲಿತಾಂಶ: ಕರ್ನಾಟಕದ ಮೇಲುಗೈ

Last Updated 5 ಜುಲೈ 2022, 17:04 IST
ಅಕ್ಷರ ಗಾತ್ರ

ಬೆಂಗಳೂರು: ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕೆ ಕಾಮೆಡ್-ಕೆ ನಡೆಸಿದ್ದ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ಮೊದಲ 10 ರ್‍ಯಾಂಕ್‌ಗಳಲ್ಲಿ ಐದು ಬೆಂಗಳೂರಿನ ಪಾಲಾಗಿವೆ.

ತಮಿಳುನಾಡು ಹೊಸೂರಿನ ಎ.ವೆಂಕಟ್‌ ಪ್ರಥಮ, ಬೆಂಗಳೂರಿನ ವಿಶಾಲ್‌ ಬೈಸಾನಿ ದ್ವಿತೀಯ, ಅಪೂರ್ವ್‌ ಟಂಡನ್‌ ತೃತೀಯ ರ್‍ಯಾಂಕ್ ಪಡೆದಿದ್ದಾರೆ.ಮೊದಲ 100 ರ‍್ಯಾಂಕ್‌ಗಳಲ್ಲಿ 52 ರ‍್ಯಾಂಕ್‌ಗಳನ್ನು ಗಳಿಸುವ ಮೂಲಕ ಕರ್ನಾಟಕದ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ.

ದೇಶದ 154 ನಗರಗಳ 230 ಪರೀಕ್ಷಾ ಕೇಂದ್ರಗಳಲ್ಲಿ ಜೂನ್ 19ರಂದು ಆನ್‌ಲೈನ್‌ ಮೂಲಕ ಪರೀಕ್ಷೆ ನಡೆದಿತ್ತು.61,635 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, 57,387 (21,108 ಕರ್ನಾಟಕ, 36278 ಕರ್ನಾಟಕೇತರ) ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.

ಅರ್ಹ ಅಭ್ಯರ್ಥಿಗಳ ರ್‍ಯಾಂಕ್‌ ಕಾರ್ಡ್‌ಗಳನ್ನು ರಚಿಸಲಾಗಿದೆ. ಕಾಮೆಡ್‌–ಕೆ ವೆಬ್‌ಸೈಟ್ www.comedk.orgನ ಅರ್ಜಿದಾರರ ಲಾಗಿನ್‌ನಲ್ಲಿ ಅಭ್ಯರ್ಥಿಗಳಿಗೆ ಮಾಹಿತಿ ಲಭ್ಯವಾಗಲಿದೆ.ಆನ್‌ಲೈನ್ ಮೋಡ್‌ನಲ್ಲಿ ಕೌನ್ಸೆಲಿಂಗ್ ನಡೆಸಲಾಗುವುದು. ಅಭ್ಯರ್ಥಿಗಳು ತಮ್ಮ ಲಾಗಿನ್ ಮೂಲಕ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಬೇಕು. ನಂತರ ದಾಖಲೆಗಳನ್ನು ಪರಿಣತ ಪರಿಶೀಲನಾ ಅಧಿಕಾರಿಗಳ ಸಮಿತಿ ಪರಿಶೀಲಿಸುತ್ತದೆ. ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ಶೀಘ್ರ ಪ್ರಕಟಿಸಲಾಗುವುದು ಎಂದು ಕಾಮೆಡ್‌–ಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಕೆಸಿಇಟಿ) ಸೇರಲು ಸಮ್ಮತಿ ನೀಡಿದ್ದು, ಇದು ಕಾಮೆಡ್‌–ಕೆ ಪರೀಕ್ಷೆಯ ಕೊನೆಯ ಫಲಿತಾಂಶವಾಗಿದೆ.

ಮೊದಲ 10 ರ್‍ಯಾಂಕ್‌ ವಿಜೇತರು

ಹೆಸರು;ಊರು

1. ಎ.ವೆಂಕಟ್‌; ತಮಿಳುನಾಡು
2. ವಿಶಾಲ್ ಬೈಸಾನಿ; ಬೆಂಗಳೂರು
3. ಅಪೂರ್ವ್‌ ಟಂಡನ್; ಬೆಂಗಳೂರು
4. ಕನಿಷ್ಕ್ ಶರ್ಮಾ; ಉತ್ತರ ಪ್ರದೇಶ
5. ಸಿದ್ಧಾರ್ಥ ಸಿಂಗ್; ಬೆಂಗಳೂರು
6 ಬೋಯಾ ಹರೇನ್ ಸಾತ್ವಿಕ್; ಬೆಂಗಳೂರು
7 ಆರವ್ ಗಿರಿ; ಬೆಂಗಳೂರು
8. ಸ್ನೇಹಾ ಪರೀಕ್‌; ಅಸ್ಸಾಂ
9. ವಿಶಾಖ ಅಗರ್‌ವಾಲ್; ರಾಜಸ್ಥಾನ
10. ಸೃಜನ್ ರಂಜನ್; ಜಾರ್ಖಂಡ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT