ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರತ್ಯೇಕತಾವಾದಿ ಚಿಂತನೆ: ಬಿಬಿಸಿ ನಿರೂಪಕಿ ವಿರುದ್ದ ದೂರು

Published : 9 ಮಾರ್ಚ್ 2024, 14:03 IST
Last Updated : 9 ಮಾರ್ಚ್ 2024, 14:03 IST
ಫಾಲೋ ಮಾಡಿ
Comments

ಲಂಡನ್‌: ಬಿಬಿಸಿಯ, ಸಿಖ್‌ ಸಮುದಾಯದ ಹೊಸ ನಿರೂಪಕಿಯಿಂದ ಪ್ರತ್ಯೇಕತಾವಾದಿ ಅಭಿಪ್ರಾಯವನ್ನು ಹೇರುವ ಯತ್ನ ನಡೆದಿದೆ ಎಂದು ಭಾರತ ಮೂಲದ ನಿವಾಸಿಗಳು ಆರೋಪಿಸಿದ್ದು, ದೂರು ನೀಡಿದ್ದಾರೆ.

ಬರಹಗಾರ್ತಿ, ಶಿಕ್ಷಕಿ ಜಸ್‌ಪ್ರೀತ್‌ ಕೌರ್ ಎಂಬವರು ಇತ್ತೀಚೆಗೆ ಬಿಬಿಸಿಯಲ್ಲಿ ‘ಏಷಿಯನ್‌ ನೆಟ್‌ವರ್ಕ್ ಚಿಲ್‌’ ಹೆಸರಿನ ವಾರದ ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದರು. 

‘ತಾನು ಕಾರ್ಯಕ್ರಮ ನಿರೂಪಿಸುವುದರ ಕುರಿತು ಜಾಲತಾಣದಲ್ಲಿಯೂ ಮಾಹಿತಿ ಹಂಚಿಕೊಂಡಿದ್ದರು. ಹಿಂದೆಯೇ ಭಾರತ ಮೂಲದ ನಿವಾಸಿಗಳಿಂದ ‘ಆಕೆ ಖಾಲಿಸ್ತಾನ್ ಪರ ಚಿಂತನೆ ಹೊಂದಿದ್ದಾರೆ’ ಎಂಬ ಆರೋಪಗಳು ಕೇಳಿಬಂದಿವೆ. 

ನಾವು ವ್ಯಕ್ತಿಗತವಾಗಿ ಅಥವಾ ಖಾಸಗಿ ಟ್ವೀಟ್‌ಗಳ ಕುರಿತು ಪ್ರತಿಕ್ರಿಯಿಸುವುದಿಲ್ಲ. ದೂರುಗಳಿದ್ದರೆ ತನಿಖೆ ಮಾಡುತ್ತೇವೆ. ಅಗತ್ಯವಿದ್ದರೆ ಕ್ರಮಜರುಗಿಸುತ್ತೇವೆ ಎಂದು ಬಿಬಿಸಿ ವಕ್ತಾರರು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT