ವಾಷಿಂಗ್ಟನ್: ಜಾಗತಿಕ ಪಿಡುಗಾಗಿ ಪರಿಣಮಿಸಿರುವ ಮಾರಣಾಂತಿಕ ಕೋವಿಡ್-19ಗೆ ಅಮೆರಿಕಾದಲ್ಲಿ ಶಿಶುವೊಂದು ಸಾವನ್ನಪ್ಪಿದೆ.

ಕೊರೊನಾ ಸೋಂಕಿಗೆ ಬಲಿಯಾದ ಅಂತ್ಯಂತ ಕಿರಿ ವಯಸ್ಸಿನ ಮಗು ಇದಾಗಿದ್ದು, ಇದನ್ನು ಅತಿ ವಿರಳ ದುರ್ಘಟನೆ ಎಂದು ಗುರುತಿಸಲಾಗಿದೆ.

ಈ ವಿಚಾರವಾಗಿ ಮಾದ್ಯಮ ಗೋಷ್ಠಿ ನಡೆಸಿರುವ ಇಲಿನಾಯ್ಸ್ ರಾಜ್ಯದ ಗವರ್ನರ್ ಜೆಬಿ ಪ್ರಿಟ್ಜ್‌ಕರ್, 'ಕಳೆದ ಇಪ್ಪತ್ನಾಲ್ಕು ಗಂಟೆ ಅವಧಿಯಲ್ಲಿ ಕೊರೊನಾ ವೈರಸ್ ಸೋಂಕಿಗೆ ಬಲಿಯಾದವರಲ್ಲಿ ಒಂದು ವರ್ಷದೊಳಗಿನ ಶಿಶುವೊಂದು ಸೇರಿದೆ' ಎಂದು ತಿಳಿಸಿದ್ದಾರೆ.

ಚಿಕಾಗೋದಲ್ಲಿ ಮೃತಪಟ್ಟ ಮಗು ಒಂದು ವರ್ಷಕ್ಕಿಂತ ಚಿಕ್ಕದಾಗಿತ್ತು. ಆ ಮಗುವಿನಲ್ಲಿ ಕೋವಿಡ್-19 ಇರುವುದು ಪತ್ತೆಯಾಗಿತ್ತು ಎಂದು ಅಲ್ಲಿನ ಸಾರ್ವಜನಿಕ ಆರೋಗ್ಯ ಇಲಾಖೆ ತಿಳಿಸಿದೆ.

'ಇಲ್ಲಿಯವರೆಗೆ ಕೊವಿಡ್-19ಗೆ ಸಂಬಂಧಿಸಿ ಘಟಿಸಿದ ಸಾವುಗಳಲ್ಲಿ ಮಗುವಿನ ಸಾವು ಸಂಭವಿಸಿರಲಿಲ್ಲ. ಇದು ಜಗತ್ತಿನಲ್ಲಿಯೇ ಮೊದಲ ಬಾರಿ ನಡೆದಿರುವ ದುರ್ಘಟನೆಯಾಗಿದ್ದು, ತುಂಬಾ ಕಳವಳಕಾರಿಯಾಗಿದೆ' ಎಂದು ಆರೋಗ್ಯ ಇಲಾಖೆ ನಿರ್ದೇಶಕರು ಆತಂಕ ವ್ಯಕ್ತಪಡಿಸಿದ್ದಾರೆ.

'ಸಾವಿಗೆ ಕಾರಣ ಕಂಡುಹಿಡಿಯುವ ಸಲುವಾಗಿ ಸಂಪೂರ್ಣ ತನಿಖೆ ನಡೆಯುತ್ತಿದೆ. ಈ ಚಿಕ್ಕ ಮಗುವಿನ ಕುಟುಂಬ ದುಃಖ ಭರಿಸುವಂತಾಗಲಿ ಎಂದು ನಾವು ಪ್ರಾರ್ಥಿಸುತ್ತೇವೆ' ಎಂದು ಅಲ್ಲಿನ ಆರೋಗ್ಯ ಇಲಾಖೆ ಹೇಳಿದೆ.

ವಿಶ್ವದಲ್ಲೇ ಅತಿ ಹೆಚ್ಚು ಕೊರೊನಾ ವೈರಸ್ ಸೋಂಕು ಪ್ರಕರಣಗಳು ಅಮೆರಿಕಾದಲ್ಲಿ ದಾಖಲಾಗಿವೆ. ಅಲ್ಲಿ 120,000 ಕ್ಕಿಂತ ಹೆಚ್ಚು ಪ್ರಕರಣಗಳು ಕಂಡುಬಂದಿದ್ದು, ಸಾವಿನ ಸಂಖ್ಯೆ 2,000 ಕ್ಕಿಂತಲೂ ಹೆಚ್ಚಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.