ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 World Update: ಶೀಘ್ರ ಲಸಿಕೆ ಹಾಕಿಸಿಕೊಳ್ಳಲು ಅಮೆರಿಕನ್ನರ ಹಿಂದೇಟು!

Last Updated 7 ಸೆಪ್ಟೆಂಬರ್ 2020, 2:31 IST
ಅಕ್ಷರ ಗಾತ್ರ

ವಾಷಿಂಗ್ಟನ್:ಒಂದು ವೇಳೆ ಕೊರೊನಾ ವೈರಸ್ ಸೋಂಕಿನ ವಿರುದ್ಧದ ಲಸಿಕೆ ತಕ್ಷಣವೇ ದೊರೆತರೆ ಅದನ್ನು ಹಾಕಿಸಿಕೊಳ್ಳಲು ಬಯಸಿದ ಅಮೆರಿಕನ್ನರ ಸಂಖ್ಯೆ ಬಹು ಕಡಿಮೆ ಇದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಉಚಿತವಾಗಿ ಲಸಿಕೆ ದೊರೆತರೆ ತಕ್ಷಣವೇ ಹಾಕಿಸಿಕೊಳ್ಳಲು ಸಿದ್ಧರಿದ್ದೀರಾ ಎಂಬ ಪ್ರಶ್ನೆಯೊಂದಿಗೆ ಸಿಬಿಎಸ್‌ ಮಾಧ್ಯಮ ಸಂಸ್ಥೆ ಸಮೀಕ್ಷೆ ನಡೆಸಿತ್ತು. ಇದಕ್ಕೆ, ಸಿದ್ಧರಿರುವುದಾಗಿ ಪ್ರತಿ 5 ಮಂದಿಗೆ ಒಬ್ಬರಂತೆ ಉತ್ತರಿಸಿದ್ದಾರೆ. ಶೇ 21ರಷ್ಟು ಮಂದಿ ಮಾತ್ರ ತಕ್ಷಣ ಲಸಿಕೆ ಹಾಕಿಸಿಕೊಳ್ಳಲು ಒಲವು ತೋರಿದ್ದಾರೆ. ಶೇ 58 ಮಂದಿ, ಇತರರು ಲಸಿಕೆ ಹಾಕಿಸಿಕೊಂಡ ಬಳಿಕ ಅದರ ಪರಿಣಾಮಗಳನ್ನು ನೋಡಿಕೊಂಡು ತಾವೂ ಹಾಕಿಸಿಕೊಳ್ಳುವುದಾಗಿ ಹೇಳಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಜಾನ್ಸ್‌ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಕೊರೊನಾ ವೈರಸ್ ರಿಸೋರ್ಸ್ ಸೆಂಟರ್ ಪ್ರಕಾರ, ಅಮೆರಿಕದಲ್ಲಿ ಈವರೆಗೆ 62.75 ಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ. 1.88 ಲಕ್ಷಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಸೋಂಕಿನಿಂದಾಗಿ ವಿಶ್ವದಲ್ಲೇ ಅತಿಹೆಚ್ಚು ಸಾವು–ನೋವು ಸಂಭವಿಸಿರುವ ದೇಶವಾಗಿದೆ ಅಮೆರಿಕ.

ಈ ಮಧ್ಯೆ, ರಷ್ಯಾದಲ್ಲಿ ಈ ವಾರದಿಂದ ಕೊರೊನಾ ವೈರಸ್ ಲಸಿಕೆ ಸಾರ್ವಜನಿಕರಿಗೆ ಸಿಗಲಿದೆ ಎಂದು ಅಲ್ಲಿನ ಸರ್ಕಾರಿ ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ಕೆಲವು ಮಾಧ್ಯಮಗಳು ವರದಿ ಮಾಡಿವೆ. ರಷ್ಯಾವು ವಿಶ್ವದಲ್ಲೇ ಮೊದಲ ಬಾರಿಗೆ ಕೋವಿಡ್–19 ಲಸಿಕೆ 'ಸ್ಪುಟ್ನಿಕ್ V' ಅಭಿವೃದ್ಧಿಪಡಿಸಿದ್ದಲ್ಲದೆ ಅನುಮೋದನೆಯನ್ನೂ ನೀಡಿದೆ.

ರಷ್ಯಾದಲ್ಲಿ ಈವರೆಗೆ 10.22 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು, 17,768 ಜನ ಸಾವಿಗೀಡಾಗಿದ್ದಾರೆ. 8.38 ಲಕ್ಷಕ್ಕೂ ಜನ ಗುಣಮುಖರಾಗಿದ್ದಾರೆ. ಸಾವಿನ ಪ್ರಮಾಣ ರಷ್ಯಾದಲ್ಲಿ ಅತಿ ಕಡಿಮೆಯಿದ್ದು, ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT