ವಾಷಿಂಗ್ಟನ್: ವಿವಿಧ ದೇಶಗಳಿಂದ ಅಮೆರಿಕಕ್ಕೆ ಆಮದಾಗುತ್ತಿರುವ ಸರಕುಗಳಿಗೆ ಸುಂಕ ವಿಧಿಸುವ ‘ಪ್ರತಿ ಸುಂಕ’ ನೀತಿಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಪ್ರಕಟಿಸಲಿದ್ದಾರೆ.

ಹೊಸ ಸುಂಕ ನೀತಿಯು ಅಮೆರಿಕದ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತವೂ ಸೇರಿದಂತೆ ವಿವಿಧ ದೇಶಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಶೇ 20ರಷ್ಟು ‘ಪ್ರತಿ ಸುಂಕ’ ವಿಧಿಸುವ ನೀತಿಯನ್ನು ಟ್ರಂಪ್ ಆಡಳಿತ ರೂಪಿಸಿದೆ ಎಂದು ವಾಷಿಂಗ್ಟನ್ ಪೋಸ್ಟ್ ಮಂಗಳವಾರ ವರದಿ ಮಾಡಿದೆ.

‘ಅಮೆರಿಕದ ಸರಕುಗಳಿಗೆ ಸುಂಕ ವಿಧಿಸುವ ಎಲ್ಲಾ ರಾಷ್ಟ್ರಗಳು ಪ್ರತಿ ಸುಂಕ ನೀತಿಯ ಗುರಿಯಾಗಲಿವೆ’ ಎಂದು ಟ್ರಂಪ್ ಹೇಳಿದ್ದಾರೆ. ‘ಅಮೆರಿಕದವರನ್ನು ಅನ್ಯಾಯವಾಗಿ ನಡೆಸಿಕೊಂಡ ದೇಶಗಳು ಪ್ರತಿ ಸುಂಕವನ್ನು ನಿರೀಕ್ಷಿಸಬೇಕು’ ಎಂದು ಅಮೆರಿಕ ಸೋಮವಾರ ತಿಳಿಸಿದೆ.

ಶ್ವೇತಭವನದ ರೋಸ್ ಗಾರ್ಡನ್ನಲ್ಲಿ ನಡೆಯಲಿರುವ ಸುದ್ದಿಗೋಷ್ಠಿಯಲ್ಲಿ ಟ್ರಂಪ್, ‘ಪ್ರತಿ ಸುಂಕ’ ನೀತಿಯ ವಿವರಗಳನ್ನು ಬಹಿರಂಗಪಡಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.