ನವದೆಹಲಿ: ಕೊರೊನಾ ಸೋಂಕು ಹರಡುವುದನ್ನು ತಪ್ಪಿಸಲು ವಿಶ್ವದ ಹಲವು ರಾಷ್ಟ್ರಗಳು ಅನೇಕ ಬಗೆಯ ಸರ್ಕಸ್ ಮಾಡಿ ಹಲವು ನಿಯಮಗಳನ್ನುಜಾರಿಗೆ ತಂದರೂ ಈ ರೋಗಕ್ಕೆ ಬಲಿಯಾಗುವವರನ್ನು ಮಾತ್ರ ತಡೆಯಲು ಸಾಧ್ಯವಾಗುತ್ತಿಲ್ಲ. ಬುಧವಾರದ ವೇಳೆಗೆ ಈ ಸೋಂಕಿನಿಂದ ವಿಶ್ವದಲ್ಲಿ ಮೃತಪಟ್ಟವರಸಂಖ್ಯೆ 3.24 ಲಕ್ಷಕ್ಕೆ ತಲುಪಿದೆ.

ವಿಶ್ವದ 213 ರಾಷ್ಟ್ರಗಳನ್ನು ಬಾಧಿಸಿದ್ದ ಕೊರೊನಾ ಸೋಂಕು ಈಗ ವಿಶ್ವದ ಮತ್ತೆರಡು ರಾಷ್ಟ್ರಗಳಾದ ದಕ್ಷಿಣ ಆಫ್ರಿಕಾದ ಲೆಸೊತೋ ಹಾಗೂ ಉತ್ತರ ಅಮೆರಿಕಾದಸೆಂಟ್ ಪಿರೆ ಮತ್ತು ಮಿಕುಲನ್ ರಾಷ್ಟ್ರಗಳಿಗೆ ತಲುಪಿದ್ದು, ಈ ರಾಷ್ಟ್ರಗಳಲ್ಲಿ ತಲಾ ಒಂದೊಂದು ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿವೆ.

ಸೋಮವಾರದಿಂದ ಇಲ್ಲಿಯವರೆಗೆ 213 ರಾಷ್ಟ್ರಗಳಿಗೆ ತಲುಪಿದ್ದ ಸೋಂಕು ಈಗ ಮತ್ತೆರಡು ರಾಷ್ಟ್ರಗಳಿಗೆ ತಲುಪಿದೆ.ವಿಶ್ವದಲ್ಲಿ ಕೊರೊನಾ ಸೋಂಕು ಪ್ರಕರಣಗಳು 49.82 ಲಕ್ಷಕ್ಕೆ ತಲುಪಿದ್ದು, ಈ ಸೋಂಕಿನಿಂದ 324,554 ಮಂದಿ ಮೃತಪಟ್ಟಿದ್ದಾರೆ.ಈ ಸೋಂಕು ಕಾಣಿಸಿಕೊಂಡವರಲ್ಲಿ ವಿಶ್ವದಲ್ಲಿ 19.56 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ವಿಶ್ವದ 27.02 ಲಕ್ಷ ಮಂದಿ ಈ ಸೋಂಕಿನಿಂದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಪಡೆಯುತ್ತಿದ್ದು, ಇವರಲ್ಲಿ 26.56 ಲಕ್ಷ ಮಂದಿಯನ್ನು ಪ್ರಸ್ತುತ ಬಾಧಿಸುತ್ತಿದೆ. ಇವರ ಸ್ಥಿತಿ ಸುಧಾರಿಸುವ ವಿಶ್ವಾಸವನ್ನು ವೈದ್ಯರು ವ್ಯಕ್ತಪಡಿಸಿದ್ದಾರೆ.

ಆದರೆ, ಇವರಲ್ಲಿ 45.42 ಸಾವಿರ ಮಂದಿ ಗಂಭೀರ ಅಥವಾ ಅಪಾಯಕರ ಸ್ಥಿತಿಯಲ್ಲಿದ್ದಾರೆ.ಇದುವರೆಗೆ ವಿಶ್ವದ ರಾಷ್ಟ್ರಗಳಲ್ಲಿ 22.80 ಲಕ್ಷ ಪ್ರಕರಣಗಳು ಮುಕ್ತಾಯಗೊಂಡಿದ್ದು, ಇವುಗಳಲ್ಲಿ 19.56 ಲಕ್ಷ ಮಂದಿ ಗುಣಮುಖರಾಗಿದ್ದರೆ,324,554 ಮಂದಿ ಮೃತಪಟ್ಟಿದ್ದಾರೆ.
ಹಲವು ರಾಷ್ಟ್ರಗಳಲ್ಲಿ ಕೊರೊನಾ ಸೋಂಕು ತಡೆಗಟ್ಟಲು ಲಾಕ್‌ಡೌನ್ ಜಾರಿಗೆ ತಂದಿದ್ದರೂ, ಆರ್ಥಿಕ ಸಂಕಷ್ಟಗಳಿಂದ ಬಳಲುವುದು ಕಂಡ ಬಂದ ಕಾರಣ ಲಾಕ್‌ಡೌನ್‌ನಲ್ಲಿ ಸಡಿಲಿಕೆ ಮಾಡಿವೆ. ಸಡಿಲಿಕೆ ಮಾಡಿದ ನಂತರ ಮತ್ತಷ್ಟು ಸೋಂಕು ಪ್ರಕರಣಗಳು ಹೆಚ್ಚಾಗಿದ್ದು ಈ ಬೆಳವಣಿಗೆ ವಿಶ್ವವನ್ನೇ ಬೆಚ್ಚಿಬೀಳಿಸಿದೆ.

ಇದನ್ನೂ ಓದಿ:Covid-19 World Update: ವಿಶ್ವದಾದ್ಯಂತ 3.19 ಲಕ್ಷ ದಾಟಿದ ಸಾವಿನ ಸಂಖ್ಯೆ

2019ರ ಡಿಸೆಂಬರ್‌ನಲ್ಲಿ ಚೀನಾದ ವುಹಾನ್ ನಗರದಲ್ಲಿ ಕಂಡು ಬಂದ ಈ ಸೋಂಕು ಕೇವಲ ಒಂದು ತಿಂಗಳ ಅವಧಿಯಲ್ಲಿ ಇಡೀ ವಿಶ್ವವನ್ನೇ ವ್ಯಾಪಿಸಿದೆ. ಈ ಸೋಂಕಿನ ತೀವ್ರತೆಯಿಂದಹೊರಬರಲು ಸಾಧ್ಯವಾಗದೆ ಎಲ್ಲಾ ರಾಷ್ಟ್ರಗಳು ತತ್ತರಿಸಿವೆ.

ಫೆಬ್ರವರಿ 8ರಿಂದಮಾರ್ಚ್ 2ರವರೆಗೆ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದರಿಂದ ವಿಶ್ವದ ಹಲವು ರಾಷ್ಟ್ರಗಳು ಎಚ್ಚೆತ್ತುಕೊಂಡು ಲಾಕ್‌ಡೌನ್ ಜಾರಿಗೊಳಿಸಿದ್ದವು.ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಗಟ್ಟುವುದೇ ಪರಿಹಾರ ಮಾರ್ಗವಾಗಿದ್ದು, ಪ್ರಸ್ತುತ ವಿಶ್ವದ ಬಹುತೇಕ ರಾಷ್ಟ್ರಗಳು ಲಾಕ್‌ಡೌನ್ ಜಾರಿಗೊಳಿಸಿವೆ.

ಅಮೆರಿಕಾದಲ್ಲಿ ಸೋಂಕಿತರ ಸಂಖ್ಯೆ 1,570,583ಕ್ಕೆ ತಲುಪಿದ್ದರೆ, ಒಟ್ಟು ಮೃತಪಟ್ಟವರ ಸಂಖ್ಯೆ 93,533ಕ್ಕೆ ಏರಿಕೆಯಾಗಿದೆ. ಬುಧವಾರದ ವೇಳೆಗೆ 17,248 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ.ರಷ್ಯಾದಲ್ಲಿ 299,941 ಪ್ರಕರಣಗಳು ಪತ್ತೆಯಾಗಿದ್ದು, 2,837 ಮಂದಿ ಮೃತಪಟ್ಟಿದ್ದಾರೆ. ಚೀನಾದಲ್ಲಿ 82,960 ಮಂದಿಯಲ್ಲಿ ಈ ಸೋಂಕು ದೃಢಪಟ್ಟಿದ್ದು, 4,634 ಮಂದಿ ಸಾವನ್ನಪ್ಪಿದ್ದಾರೆ.

ಭಾರತದಲ್ಲಿ ಇಲ್ಲಿಯವರೆಗೆ 106,475 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 3,302 ಮಂದಿ ಸಾವನ್ನಪ್ಪಿದ್ದಾರೆ.ಬ್ರಿಟನ್‌ನಲ್ಲಿ 248,818 ಮಂದಿಗೆ ಸೋಂಕು ತಗುಲಿದ್ದು, 35,341 ಮಂದಿ ಸಾವನ್ನಪ್ಪಿದ್ದಾರೆ.ಇಟಲಿಯಲ್ಲಿ 226,699 ಮಂದಿಗೆ ಈ ಸೋಂಕು ದೃಢಪಟ್ಟಿದ್ದು, 32,169 ಮಂದಿ ಸಾವನ್ನಪ್ಪಿದ್ದಾರೆ.ಸ್ಪೇನ್‌ನಲ್ಲಿ 271,885 ಮಂದಿಗೆ ಈ ಸೋಂಕು ತಗುಲಿದ್ದು, 27,778 ಮಂದಿಮೃತಪಟ್ಟಿದ್ದಾರೆ.ಪಾಕಿಸ್ತಾನದಲ್ಲಿ 43,966 ಜನರಲ್ಲಿ ಈ ಸೋಂಕು ದೃಢಪಟ್ಟಿದ್ದು, 939 ಮಂದಿ ಸಾವನ್ನಪ್ಪಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.