ವಾಷಿಂಗ್ಟನ್: ಜಗತ್ತಿನಾದ್ಯಂತ ಸುಮಾರು 2.49 ಕೋಟಿ ಜನರು ಕೋವಿಡ್-19 ಸೋಂಕಿಗೆ ಒಳಗಾಗಿದ್ದರೆ, 8.41 ಲಕ್ಷ ಜನರು ಸಾವಿಗೀಡಾಗಿದ್ದಾರೆ. ಈ ಮಧ್ಯೆ ಮೊದಲ ಪ್ರಕರಣ ವರದಿಯಾದ ಕೇವಲ ಆರು ತಿಂಗಳ ನಂತರ ಬ್ರೆಜಿಲ್‌ನಲ್ಲಿ ಶನಿವಾರದ ವೇಳೆಗೆ 1,20,000ಕ್ಕೂ ಅಧಿಕ ಜನರು ಸಾವಿಗೀಡಾಗಿದ್ದಾರೆ.

ಅಮೆರಿಕದಲ್ಲಿ ಕೊರೊನಾ ವೈರಸ್ ಪರೀಕ್ಷೆಯ ಬಗ್ಗೆ ಕೆಲವು ರಾಷ್ಟ್ರದ ಕೆಲವು ಪ್ರಮುಖ ಸಾರ್ವಜನಿಕ ಆರೋಗ್ಯ ತಜ್ಞರು ಹೊಸ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ನಿರ್ಧಿಷ್ಟ ಪ್ರಮಾಣದ ಪರೀಕ್ಷೆಗಳಲ್ಲಿ ಅಪಾರ ಪ್ರಮಾಣದ ಸಂಖ್ಯೆಯ ಜನರಿಗೆ ಸೋಂಕು ತಗುಲಿರುವುದು ಪತ್ತೆಯಾಗುತ್ತಿದೆ.

ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಕೊರೊನಾ ವೈರಸ್ ರಿಸೋರ್ಸ್ ಸೆಂಟರ್ ಪ್ರಕಾರ, ಜಗತ್ತಿನಾದ್ಯಂತ ಸೋಂಕಿತರ ಸಂಖ್ಯೆ 2,49,14,886ಗೆ ಏರಿದ್ದು, 8,41,549 ಮಂದಿ ಮೃತಪಟ್ಟಿದ್ದಾರೆ. 1,63,41,204 ಸೋಂಕಿತರು ಗುಣಮುಖರಾಗಿದ್ದಾರೆ.

ಇದನ್ನೂ ಓದಿ:ಅಮೆರಿಕದಲ್ಲಿ ‘ರೆಮ್ಡೆಸಿವಿರ್’ ಬಳಕೆಗೆ ಒಪ್ಪಿಗೆ

ಸೋಂಕಿತರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಅಮೆರಿಕದಲ್ಲಿ 59,60,596 ಜನರಿಗೆ ಕೋವಿಡ್-19 ದೃಢಪಟ್ಟಿದೆ.ಸದ್ಯ 1,82,760 ಮಂದಿಪ್ರಾಣ ಕಳೆದುಕೊಂಡಿದ್ದಾರೆ. 2,140,614 ಜನರು ಈವರೆಗೆಗುಣಮುಖರಾಗಿದ್ದಾರೆ.

ಅಮೆರಿಕ ನಂತರ ಅತಿಹೆಚ್ಚು ಪ್ರಕರಣಗಳು ವರದಿಯಾದ ರಾಷ್ಟ್ರಗಳ ಸಾಲಿನಲ್ಲಿರುವ ಬ್ರೆಜಿಲ್‌ನಲ್ಲಿ 38,46,153 ಪ್ರಕರಣಗಳು ಪತ್ತೆಯಾಗಿವೆ.38,46,153 ಸೋಂಕಿತರು ಗುಣಮುಖರಾಗಿದ್ದು, 1,20,262 ಜನರು ಮೃತಪಟ್ಟಿದ್ದಾರೆ.

ಕೊರೊನಾ ವೈರಸ್ ಸೋಂಕಿತರ ಪೈಕಿ ಮೂರನೇ ಸ್ಥಾನದಲ್ಲಿರುವಭಾರತದಲ್ಲಿ 34,63,972 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, 26,48,998 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈವರೆಗೂ 62,550 ಮಂದಿ ಮೃತಪಟ್ಟಿದ್ದಾರೆ.

ರಷ್ಯಾದಲ್ಲಿ 9,82,573, ದಕ್ಷಿಣ ಆಫ್ರಿಕಾದಲ್ಲಿ 6,22,551, ಪೆರುವಿನಲ್ಲಿ 6,29,961, ಚಿಲಿಯಲ್ಲಿ 4,08,009, ಇರಾನ್‌ನಲ್ಲಿ 3,71,816, ಇಂಗ್ಲೆಂಡ್‌ನಲ್ಲಿ 3,34,916 ಮತ್ತು ಸ್ಪೇನ್‌ನಲ್ಲಿ 4,39,286 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ.

ಕೋವಿಡ್‌ನಿಂದಾಗಿ ಇಂಗ್ಲೆಂಡ್‌ನಲ್ಲಿ 41,585, ಇಟಲಿಯಲ್ಲಿ 35,473, ಮೆಕ್ಸಿಕೊದಲ್ಲಿ 63,819, ಪ್ರಾನ್ಸ್‌ನಲ್ಲಿ 30,601, ಸ್ಪೇನ್‌ನಲ್ಲಿ 29,011, ಪೆರುವಿನಲ್ಲಿ 28,471, ರಷ್ಯಾದಲ್ಲಿ 16,977, ಚಿಲಿಯಲ್ಲಿ 16,977, ದಕ್ಷಿಣ ಆಫ್ರಿಕಾದಲ್ಲಿ 13,981 ಮತ್ತು ಪಾಕಿಸ್ತಾನದಲ್ಲಿ 6,284 ಜನರು ಸಾವಿಗೀಡಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.