ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕೆ ರಫ್ತಿನ ಮೇಲೆ ನಿರ್ಬಂಧ: ಬಡ ದೇಶಗಳಿಗೆ ಸಂಕಷ್ಟ

Last Updated 11 ಏಪ್ರಿಲ್ 2021, 4:04 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಜಾಗತಿಕವಾಗಿ ಕೆಲವು ದೇಶಗಳು ಕೋವಿಡ್‌ ಲಸಿಕೆಯ ರಫ್ತಿನ ಮೇಲೆ ನಿರ್ಬಂಧ ವಿಧಿಸಿರುವುದರಿಂದಬಡದೇಶಗಳಿಗೆ ಸಂಕಷ್ಟ ಎದುರಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಜೂನ್‌ ಕೊನೆಯವರೆಗೂ ಲಸಿಕೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಕೆಲವು ದೇಶಗಳು ಕೋವಿಡ್‌ ಲಸಿಕೆಯ ರಫ್ತನ್ನು ನಿಷೇಧಿಸಿವೆ. ಕಳೆದ ಎರಡು ವಾರಗಳಲ್ಲಿ ಕೇವಲ 20ಲಕ್ಷ ಡೋಸೆಜ್‌ಗಳು 90 ದೇಶಗಳಿಗೆ ರಫ್ತಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಭಾರತದಲ್ಲಿ ಸೀರಂ ಕಂಪನಿ ಉತ್ಪಾದಿಸುವ ಕೋವಿಡ್‌ ಲಸಿಕೆಗಳ ಮೇಲಿನ ರಫ್ತಿಗೆ ಭಾರತ ಸರ್ಕಾರ ನಿರ್ಬಂಧ ವಿಧಿಸಿದರೆ ಸುಮಾರು 80ಕ್ಕೂ ಹೆಚ್ಚು ದೇಶಗಳಿಗೆ ಸಂಕಷ್ಟ ಎದುರಾಗಲಿದೆ. ಭಾರತದಲ್ಲಿ ಕೋವಿಡ್‌ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವುದು ಬಡ ದೇಶಗಳ ಆತಂಕಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT