ವಾಷಿಂಗ್ಟನ್:ಜಾನ್ ಹಾಪ್ಕಿನ್ಸ್ ವಿಶ್ವ ವಿದ್ಯಾಲಯದ ಕೊರೊನಾವೈರಸ್ ಸಂಪನ್ಮೂಲ ಕೇಂದ್ರದ ಅಂಕಿ ಅಂಶಗಳ ಪ್ರಕಾರ ಜಗತ್ತಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,09,67,027 ಆಗಿದೆ.

ಅತೀ ಹೆಚ್ಚು ಸೋಂಕಿತರಿರುವ ದೇಶ ಅಮೆರಿಕದಲ್ಲಿ 52,58,056 ಸೋಂಕಿತರಿದ್ದು, ಬ್ರೆಜಿಲ್- 32,24,876, ಭಾರತ -32,24,876, ರಷ್ಯಾ- 9,10,778, ದಕ್ಷಿಣ ಆಫ್ರಿಕಾದಲ್ಲಿ5,72,865 ಮಂದಿ ಸೋಂಕಿತರಿದ್ದಾರೆ.

ಜಾಗತಿಕವಾಗಿ ಇಲ್ಲಿಯವರೆಗೆ ಕೊರೊನಾ ಸೋಂಕಿನಿಂದಮೃತಪಟ್ಟವರ ಸಂಖ್ಯೆ 7,60,461 ಆಗಿದೆ. ಅಮೆರಿಕದಲ್ಲಿ 1,67,298, ಬ್ರೆಜಿಲ್-1,05,463 ಮತ್ತು ಮೆಕ್ಸಿಕೊದಲ್ಲಿ 55,293 ಮಂದಿ ಸಾವಿಗೀಡಾಗಿದ್ದಾರೆ. ವರ್ಲ್ಡೊಮೀಟರ್ ಅಂಕಿ ಅಂಶಗಳ ಪ್ರಕಾರ 1,39,85,788 ಮಂದಿ ಈವರೆಗೆ ಗುಣಮುಖರಾಗಿದ್ದಾರೆ.

ಮೆಕ್ಸಿಕೊದಲ್ಲಿ ಒಂದೇ ದಿನ 627 ಸಾವು

ಮೆಕ್ಸಿಕೊದಲ್ಲಿ ಒಂದೇ ದಿನ 7,371 ಹೊಸ ಕೋವಿಡ್ ಪ್ರಕರಣ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 5,05,751 ಆಗಿದೆ ಎಂದು ಆರೋಗ್ಯ ಇಲಾಖೆ ಗುರುವಾರ ಹೇಳಿದೆ. 627 ಮಂದಿ ಮೃತಪಟ್ಟಿದ್ದು ಸಾವಿನ ಸಂಖ್ಯೆ 55, 293ಕ್ಕೇರಿದೆ.

ಮಾಸ್ಕ್ ಕಡ್ಡಾಯ ಮಾಡಿ

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ದೇಶದಾದ್ಯಂತ ಇನ್ನೂ ಮುೂರು ತಿಂಗಳುಗಳ ಕಾಲ ಮಾಸ್ಕ್ ಧರಿಸಲು ಅಧಿಕೃತ ಆದೇಶ ಹೊರಡಿಸಬೇಕು ಎಂದು ಹೇಳಿದ್ದಾರೆ.
ಮಾಸ್ಕ್ ಧರಿಸುವುದರಿಂದ ವೈರಸ್ ಹರಡುವುದನ್ನು ತಡೆಯಬಹುದು. ಇದು ಜನರಿಗೆ ಸೋಂಕು ತಗುಲದಂತೆ ತಡೆಯುತ್ತದೆ. ಇದು ಅಮೆರಿಕ, ದೇಶಪ್ರೇಮಿಗಳಾಗಿ. ಮುಂದಿನ ಮೂರು ತಿಂಗಳುಗಳ ಕಾಲ ಮನೆಯಿಂದ ಹೊರಗೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿ. ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಬೇಕು ಎಂದು ಬಿಡೆನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.