ಢಾಕಾ: ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಕಚ್ಚಾ ಬಾಂಬ್ ಸ್ಫೋಟದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಢಾಕಾದ ಮೋಘ್ ಬಜಾರ್ ಪ್ರದೇಶದಲ್ಲಿರುವ 1971ರ ಬಾಂಗ್ಲಾದೇಶ ವಿಮೋಚನಾ ಹೋರಾಟದಲ್ಲಿ ಭಾಗಿಯಾಗಿದ್ದ ನಿವೃತ್ತ ಯೋಧರ ಕೇಂದ್ರ ಕಚೇರಿಯ ಮುಂಭಾಗದಲ್ಲಿರುವ ಮೇಲ್ಸೇತುವೆಯಿಂದ ಅಪರಿಚಿತನೊಬ್ಬ ಕಚ್ಚಾ ಬಾಂಬ್ ಎಸೆದಿದ್ದಾನೆ. ಮೇಲ್ಸೇತುವೆಯ ಕೆಳಗಿನ ಅಂಗಡಿಯಲ್ಲಿ ಚಹಾ ಕುಡಿಯುತ್ತಿದ್ದ ಖಾಸಗಿ ಕಂಪನಿಯೊಂದರ ಉದ್ಯೋಗಿಯೊಬ್ಬ ಮೃತಪಟ್ಟಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

ದೇಶಭ್ರಷ್ಟನಾಗಿ 17 ವರ್ಷದಿಂದ ಲಂಡನ್ನಲ್ಲಿ ನೆಲಸಿದ್ದ ಝಿಯಾ ಕುಟುಂಬದ ವಾರಸುದಾರ, ಬಾಂಗ್ಲಾದೇಶ ನ್ಯಾಷನಲಿಷ್ಟ್ ಪಕ್ಷದ ಹಂಗಾಮಿ ಅಧ್ಯಕ್ಷ ತಾರೀಖ್ ರೆಹಮಾನ್ ಗುರುವಾರ ಸ್ವದೇಶಕ್ಕೆ ಮರಳುತ್ತಿದ್ದಾರೆ. ಅದಕ್ಕೂ ಮುನ್ನಾ ದಿನವೇ ಈ ದುರ್ಘಟನೆ ಸಂಭವಿಸಿದೆ.