ಬೋಸ್ಟನ್: ಶ್ವಾನ ಸೇರಿದಂತೆ ಪ್ರಾಣಿಗಳನ್ನು ಹೋಲುವ ರೊಬೊಟ್‌ಗಳು ಮಾರಾಟಕ್ಕೆ ಸಿದ್ಧವಿದ್ದು, ಇವುಗಳ ಬೆಲೆ ಅಂದಾಜು ₹56 ಲಕ್ಷ (75,000 ಯುಎಸ್‌ಡಿ). ಬೋಸ್ಟನ್ ಡೈನಮಿಕ್ಸ್ ಸಂಸ್ಥೆಯು ಆನ್‌ಲೈನ್‌ನಲ್ಲಿ ಮಂಗಳವಾರದಿಂದ ಇವುಗಳ ಮಾರಾಟ ಶುರು ಮಾಡಿದೆ.

ಈ ರೊಬೊಟ್‌ಗಳು ಮೆಟ್ಟಿಲು ಹತ್ತಿ ಇಳಿಯುವ, ಮನೆಯ ಬಾಗಿಲು ತೆರೆಯುವ ಕೌಶಲ ಹೊಂದಿವೆ.

ಇವುಗಳನ್ನು ಇತರರ ವಿರುದ್ಧ ಅಸ್ತ್ರಗಳನ್ನಾಗಿ ಬಳಸಿಕೊಳ್ಳುವುದಿಲ್ಲ ಎಂಬುದಾಗಿಆನ್‌ಲೈನ್‌ನಲ್ಲಿ ಖರೀದಿಸುವವರು ವಾಗ್ದಾನ ನೀಡಬೇಕಿದೆ ಎಂದು ಸಂಸ್ಥೆ ತಿಳಿಸಿದೆ.

‘ಸ್ಪಾಟ್’ ಒಂದು ಅದ್ಭುತವಾದ ಉತ್ಪನ್ನ. ಆದರೆ ಇವು ಮನೆ ಬಳಕೆಗೆ ಅಥವಾ ಮಕ್ಕಳಿಗೆ ಸುರಕ್ಷಿತ ಎಂಬ ಬಗ್ಗೆ ಇನ್ನೂ ಪ್ರಮಾಣೀಕರಿಸಿಲ್ಲ ಎಂದು ಷರತ್ತಿನಲ್ಲಿ ಉಲ್ಲೇಖಿಸಲಾಗಿದೆ.

ಸೇನಾ ಅನುದಾನಿತ ಸಂಶೋಧನೆಯ ಮೂಲಕ ಬೋಸ್ಟನ್ ಡೈನಮಿಕ್ಸ್ ಸಂಸ್ಥೆಯು ಕೌಶಲಪೂರ್ಣ ರೊಬೊಟ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಆದರೆ ವಾಣಿಜ್ಯ ಬಳಕೆಗೆ ಇವುಗಳನ್ನು ಮುಕ್ತಗೊಳಿಸಿದ್ದು ಇದೇ ಮೊದಲು.

ಬೃಹತ್ ಪ್ರಮಾಣದಲ್ಲಿ ‘ಸ್ಪಾಟ್’ ಉತ್ಪಾದನೆ ಮಾಡುವುದಾಗಿ ಕಳೆದ ವರ್ಷ ಸಂಸ್ಥೆ ತಿಳಿಸಿತ್ತು. ಪ್ರಾಯೋಗಿಕ ಯೋಜನೆಯಲ್ಲಿ ಈ ರೀತಿಯ 150 ರೊಬೊಟ್‌ಗಳನ್ನು ತಯಾರಿಸಲಾಗಿದೆ.

ಸಿಂಗಪುರದಲ್ಲಿ ಕಳೆದ ವರ್ಷ ಪ್ರಾಯೋಗಿಕವಾಗಿ ಉದ್ಯಾನವೊಂದರಲ್ಲಿ ರೊಬೊಟ್ ಕೆಲಸ ಮಾಡಲು ಶುರುಮಾಡಿದೆ. ವಾಯುವಿಹಾರಿಗಳು ಪರಸ್ಪರ ಅಂತರ ಕಾಪಾಡಿಕೊಳ್ಳಬೇಕು ಎಂಬ ಧ್ವನಿಮುದ್ರಿತ ಸಂದೇಶವನ್ನು ಪ್ರಸಾರ ಮಾಡಲು ರೊಬೊಟ್ ಅನ್ನು ಬಳಸಿಕೊಳ್ಳಲಾಗಿದೆ.

ವಾಣಿಜ್ಯ ಮತ್ತು ಕೈಗಾರಿಕಾ ಬಳಕೆಗೆ ಮಾತ್ರ ಇವು ಲಭ್ಯವಿದ್ದು, ಸದ್ಯ ಅಮೆರಿಕದಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.