ವಾಷಿಂಗ್ಟನ್: ತೈಲ ಬೆಲೆ ಇಳಿಕೆ ಮಾಡಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಒಪೆಕ್ ರಾಷ್ಟ್ರಗಳನ್ನು ಕೋರಿದ್ದಾರೆ. ಇದರಿಂದ ರಷ್ಯಾ–ಉಕ್ರೇನ್ ಯುದ್ಧ ನಿಲ್ಲಲಿದೆ ಎಂದು ಅವರು ಹೇಳಿದ್ದಾರೆ.

‘ಒಪೆಕ್ ರಾಷ್ಟ್ರಗಳು ಇಂಧನ ದರ ಇಳಿಸಬೇಕು. ಇದರಿಂದ ಉಕ್ರೇನ್ನಲ್ಲಿ ನಡೆಯುತ್ತಿರುವ ದುರಂತ ತನ್ನಿಂತಾನೆ ನಿಲ್ಲುತ್ತದೆ. ಇದು ಎರಡೂ ಕಡೆಯಿಂದ ನಡೆಯುತ್ತಿರುವ ದುರಂತವಾಗಿದೆ’ ಎಂದು ಉತ್ತರ ಕರೊಲಿನಾದಲ್ಲಿ ಪತ್ರಕರ್ತರೊಂದಿಗೆ ಅವರು ಮಾತನಾಡುವಾಗ ಅವರು ಹೇಳಿದ್ದಾರೆ.
.ಆಳ ಅಗಲ | ಟ್ರಂಪ್ ಪೌರತ್ವ ನೀತಿ: ಭಾರತೀಯರ ಕನಸಿಗೆ ಕೊಳ್ಳಿ.
‘ಯುದ್ಧದಲ್ಲಿ ಈಗಾಗಲೇ ರಷ್ಯಾ ಹಾಗೂ ಉಕ್ರೇನ್ನ ಭಾರಿ ಸಂಖ್ಯೆಯಲ್ಲಿ ಯೋಧರು ಸಾವಿಗೀಡಾಗಿದ್ದಾರೆ. ಇದೀಗ ಗುಂಡುಗಳು ಜನರನ್ನು ಸಾಯಿಸುತ್ತಿವೆ. ಲಕ್ಷಕ್ಕೂ ಅಧಿಕ ಮಂದಿ ಕೊಲ್ಲಲ್ಪಟ್ಟಿದ್ದಾರೆ. ವಾರಕ್ಕೆ ಸಾವಿರಾರು ಮಂದಿ ಸಾವಿಗೀಡಾಗುತ್ತಿದ್ದಾರೆ’ ಎಂದು ಟ್ರಂಪ್ ಹೇಳಿದ್ದಾರೆ.

‘ಇದು ಹುಚ್ಚುತನವಾಗಿದೆ. ಇದು ಹುಚ್ಚು ಯುದ್ಧವಾಗಿದೆ. ಆಗ ನಾನು ಅಧ್ಯಕ್ಷನಾಗಿದ್ದರೆ ಇದು ಎಂದಿಗೂ ಸಂಭವಿಸುತ್ತಿರಲಿಲ್ಲ. ನಾವು ಅದನ್ನು ನಿಲ್ಲಿಸಲು ಬಯಸುತ್ತೇವೆ’ ಎಂದು ಟ್ರಂಪ್ ಹೇಳಿದ್ದಾರೆ.
.ಜನ್ಮದತ್ತ ಪೌರತ್ವ ನಿಯಮ ರದ್ದು: ಡೊನಾಲ್ಡ್ ಟ್ರಂಪ್ ಆದೇಶಕ್ಕೆ ಕೋರ್ಟ್ ತಡೆ .
‘ಯುದ್ಧವನ್ನು ತ್ವರಿತವಾಗಿ ನಿಲ್ಲಿಸಲು ಇರುವ ಒಂದೇ ಮಾರ್ಗ ಎಂದರೆ, OPEC ರಾಷ್ಟ್ರಗಳು ತುಂಬಾ ಹಣವನ್ನು ಮಾಡುವುದನ್ನು ನಿಲ್ಲಿಸುವುದು ಮತ್ತು ತೈಲ ಬೆಲೆಯನ್ನು ಕಡಿಮೆ ಮಾಡುವುದು. ಬೆಲೆ ಹೆಚ್ಚಿದ್ದರೆ ಯುದ್ಧವು ಅಷ್ಟು ಸುಲಭವಾಗಿ ಕೊನೆಗೊಳ್ಳುವುದಿಲ್ಲ. ಈಗ ಚೆಂಡು ಒಪೆಕ್ ಅಂಗಳದಲ್ಲಿದ್ದು, ಅವರು ತೈಲ ಬೆಲೆಯನ್ನು ಇಳಿಸಬೇಕು ಮತ್ತು ಯುದ್ಧವು ತಕ್ಷಣವೇ ನಿಲ್ಲುತ್ತದೆ’ ಎಂದು ಟ್ರಂಪ್ ಹೇಳಿದ್ದಾರೆ.

ಈ ಹಿಂದೆ ಕೂಡ ಟ್ರಂಪ್ ಇದೇ ರೀತಿಯ ಹೇಳಿಕೆಯನ್ನು ನೀಡಿದ್ದರು. ಸ್ವಿಜರ್ಲ್ಯಾಂಡ್ನ ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಭಾಗಿಯಾಗಿದ್ದ ಟ್ರಂಪ್, ಒಪೆಕ್ ಹಾಗೂ ತೈಲ ರಫ್ತು ರಾಷ್ಟ್ರಗಳ ಒಕ್ಕೂಟಗಳೇ ಮೂರು ವರ್ಷಗಳಿಂದ ನಡೆಯುತ್ತಿರುವ ರಷ್ಯಾ–ಉಕ್ರೇನ್ ಯುದ್ಧಕ್ಕೆ ಕಾರಣ ಎಂದು ಹೇಳಿದ್ದರು.
.ಯುದ್ಧ ನಿಲ್ಲಿಸದಿದ್ದರೆ ಹೆಚ್ಚಿನ ನಿರ್ಬಂಧ: ರಷ್ಯಾಗೆ ಟ್ರಂಪ್ ಎಚ್ಚರಿಕೆ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.