ಸಿಯಾಟಲ್: ಜನ್ಮದಿಂದಾಗಿ ಸಿಗುವ ಅಮೆರಿಕ ಪೌರತ್ವ ಹಕ್ಕನ್ನು ರದ್ದುಗೊಳಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಡಿಸಿದ್ದ ಆದೇಶಕ್ಕೆ ಇಲ್ಲಿನ ಜಿಲ್ಲಾ ನ್ಯಾಯಾಲಯ ತಾತ್ಕಾಲಿಕ ತಡೆ ನೀಡಿದೆ.

ಟ್ರಂಪ್ ಹೊರಡಿಸಿದ್ದ ಆದೇಶ ಪ್ರಶ್ನಿಸಿ ವಾಷಿಂಗ್ಟನ್, ಅರಿಜೋನಾ, ಇಲಿನಾಯ್ಸ್ ಹಾಗೂ ಒರೆಗಾನ್ ರಾಜ್ಯಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದವು. ಅಮೆರಿಕದಲ್ಲಿ ಜನಿಸಿದವರಿಗೆ ಸಿಗುವ ಪೌರತ್ವ ಹಕ್ಕು ಕುರಿತ ಕಾಯ್ದೆಗೆ ಸಂವಿಧಾನದ 14ನೇ ತಿದ್ದುಪಡಿ ಹಾಗೂ ಸುಪ್ರೀಂ ಕೋರ್ಟ್ ತೀರ್ಪಿನ ಖಾತ್ರಿ ಇದೆ ಎಂದು ಈ ರಾಜ್ಯಗಳು ವಾದಿಸಿದ್ದವು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಜಾನ್ ಸಿ.ಕಾಫೆನೋರ್, ಈ ಕುರಿತ ಆದೇಶ ಹೊರಡಿಸಿದ್ದಾರೆ.

ಜನ್ಮದಿಂದಾಗಿ ಸಿಗುವ ಪೌರತ್ವದ ಹಕ್ಕು ರದ್ದುಪಡಿಸಿ ಟ್ರಂಪ್ ಹೊರಡಿಸಿರುವ ಆದೇಶ ಪ್ರಶ್ನಿಸಿ ಒಟ್ಟು 22 ರಾಜ್ಯಗಳು ಕೋರ್ಟ್ ಮೆಟ್ಟಿಲೇರಿವೆ. ಅಲ್ಲದೇ, ಹಲವಾರು ವಲಸಿಗರ ಹಕ್ಕುಗಳ ಗುಂಪುಗಳು ಕೂಡ ಈ ಸಂಬಂಧ ಅರ್ಜಿ ಸಲ್ಲಿಸಿವೆ.

ಟ್ರಂಪ್ ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೊದಲನೇ ದಿನವೇ ಈ ಕುರಿತ ಆದೇಶಕ್ಕೆ ಸಹಿ ಹಾಕಿದ್ದರು. ಈ ಆದೇಶವು ಫೆಬ್ರುವರಿ 19ರಿಂದ ಜಾರಿಗೆ ಬರಲಿದೆ. ದೇಶದಲ್ಲಿ ಜನಿಸುವ ಸಾವಿರಾರು ಜನರ ಮೇಲೆ ಈ ಆದೇಶ ಪರಿಣಾಮ ಬೀರುವುದು ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಗಳಲ್ಲಿ ವಿವರಿಸಲಾಗಿದೆ.
.ಟ್ರಂಪ್ ಹೊಸ ವಲಸೆ ನೀತಿ: ಗಡಿ ಜನರಲ್ಲಿ ಭಯ, ಆತಂಕ, ಅಭದ್ರತೆ.ಯುದ್ಧ ನಿಲ್ಲಿಸದಿದ್ದರೆ ಹೆಚ್ಚಿನ ನಿರ್ಬಂಧ: ರಷ್ಯಾಗೆ ಟ್ರಂಪ್ ಎಚ್ಚರಿಕೆ .
ಟ್ರಂಪ್ ಆದೇಶ ಏನು?

ಟ್ರಂಪ್ ಅವರ ಹೊಸ ಆದೇಶವು, ಹುಟ್ಟಿನಿಂದಲೇ ಸ್ವಯಂಚಾಲಿತವಾಗಿ ಪೌರತ್ವ ದತ್ತವಾಗುವುದಿಲ್ಲ.

ಮಗುವಿನ ತಾಯಿ ಕಾನೂನುಬದ್ಧವಾಗಿ ಅಮೆರಿಕದಲ್ಲಿ ಇಲ್ಲದಿದ್ದರೆ ಅಥವಾ ತಂದೆ ಕಾನೂನು ಬದ್ಧವಾಗಿ ಅಮೆರಿಕದ ಖಾಯಂ ನಿವಾಸಿ ಆಗಿರದಿದ್ದರೆ ಅಂಥವರಿಗೆ ಹುಟ್ಟಿನಿಂದಲೇ ಪೌರತ್ವ ಪ್ರಾಪ್ತವಾಗುವುದಿಲ್ಲ.

ತಾಯಿ ಕಾನೂನುಬದ್ಧವಾಗಿ ಅಮೆರಿಕದ ಖಾಯಂ ನಿವಾಸಿಯಾಗಿದ್ದು, ತಂದೆ ತಾತ್ಕಾಲಿಕ ನಾಗರಿಕನಾಗಿದ್ದರೆ ಅಂಥವರು ಹುಟ್ಟಿನಿಂದಾಗಿ ಸಿಗುವ ಪೌರತ್ವಕ್ಕೆ ಅರ್ಹರಲ್ಲ.
.ಜನ್ಮದತ್ತ ಪೌರತ್ವ ರದ್ದು: ಟ್ರಂಪ್ ನಿರ್ಧಾರಕ್ಕೆ ಭಾರತ ಮೂಲದ ಸಂಸದರ ವಿರೋಧ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.