ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐವಾ ರಿಪಬ್ಲಿಕನ್‌ ಕಾಕಸಸ್‌ನಲ್ಲಿ ಟ್ರಂಪ್‌ ಗೆಲುವು: ಭಾರತೀಯ ಸಂಜಾತರಿಗೆ ಹಿನ್ನಡೆ

Published 16 ಜನವರಿ 2024, 5:20 IST
Last Updated 16 ಜನವರಿ 2024, 5:20 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಆಕಾಂಕ್ಷಿ ಡೊನಾಲ್ಡ್ ಟ್ರಂಪ್‌ ಮುನ್ನಡೆ ಸಾಧಿಸಿದ್ದಾರೆ. ಐವಾ ಕಾಕಸಸ್‌ನಲ್ಲಿ (ಅಧ್ಯಕ್ಷೀಯ ಚುನಾವಣೆಗೂ ಮುನ್ನ ನಡೆಯುವ ಅಧ್ಯಕ್ಷ ಆಕಾಂಕ್ಷಿಗಳ ನಡುವೆ ನಡೆಯುವ ಸ್ಪರ್ಧೆ) ಅವರು ಗೆಲುವು ಸಾಧಿಸಿದ್ದಾರೆ. ಆ ಮೂಲಕ 2024ರಲ್ಲಿ ಮತ್ತೆ ಶ್ವೇತಭವನ ಪ್ರವೇಶ ಮಾಡುವ ಅವರ ಮಹತ್ವಕಾಂಕ್ಷೆಗೆ ಮತ್ತಷ್ಟು ಬಲ ಬಂದಂತಾಗಿದೆ.

ಫ್ಲೊರಿಡಾ ಗವರ್ನರ್‌ ರಾನ್‌ ಡಿ ಸಾಂಟಿಸ್ ಎರಡನೇ ಸ್ಥಾನಲ್ಲಿದ್ದು, ಭಾರತೀಯ ಮೂಲದ ನಿಕ್ಕಿ ಹ್ಯಾಲೆ ಮೂರನೇ ಸ್ಥಾನ ಪಡೆದಿದ್ದಾರೆ. ಇನ್ನೋರ್ವ ಭಾರತೀಯ ಸಂಜಾತ ವಿವೇಕ್ ರಾಮಸ್ವಾಮಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

77 ವರ್ಷದ ಟ್ರಂಪ್‌ ಶೇ 50ಕ್ಕೂ ಅಧಿಕ ಮತಗಳಿಸಿ ಅಭೂತಪೂರ್ವ ಗೆಲುವು ದಾಖಲಿಸಿದ್ದಾರೆ.

ಶೂನ್ಯ ತಾಪಮಾನ ಹಾಗೂ ಟ್ರಂಪ್‌ ವಿರುದ್ಧ ಇರುವ ದೋಷಾರೋಪಣೆಯ ಆರೋಪಗಳನ್ನು ಲೆಕ್ಕಿಸದೆ, ನೂರಾರು ಅಭಿಮಾನಿಗಳು ಐವಾದಲ್ಲಿ ನಡೆದ ರಿಪಬ್ಲಿಕನ್‌ ಪ್ರೈಮರಿ ಕಾಕಸಸ್‌ನಲ್ಲಿ ಭಾಗವಹಿಸಿದರು.

ಈ ಗೆಲುವಿನ ಬಳಿಕ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗಳ ಪೈಕಿ ಟ್ರಂಪ್ ಅವರು ಮತ್ತಷ್ಟು ಪ್ರಬಲರಾಗಿದ್ದಾರೆ. ಜ. 23ರಂದು ನ್ಯೂ ಹೆಮಿಸ್ಪಿಯರ್‌ನಲ್ಲಿ ಪ್ರಾಥಮಿಕ ಚುನಾವಣೆ ನಡೆಯಲಿದ್ದು, ಅಲ್ಲಿ ಟ್ರಂಪ್ ಅವರು ಹೆಚ್ಚಿನ ಮುನ್ನಡೆ ಹೊಂದಿದ್ದಾರೆ.

ಆಕಾಂಕ್ಷಿಗಳಲ್ಲಿ ಗೆಲುವು ಸಾಧಿಸಿದವರು, ನವೆಂಬರ್‌ ತಿಂಗಳಿನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡೆನ್‌ ಅವರನ್ನು ಎದುರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT