ಲಂಡನ್: ಅಂತರರಾಷ್ಟ್ರೀಯ ಸಂಬಂಧಗಳ ವಿಚಾರದಲ್ಲಿ, ವಿವಿಧ ದೇಶಗಳ ಕೈಯಲ್ಲಿ ಅಧಿಕಾರ ಹಂಚಿಕೆಯಾಗುವಂತಹ ‘ಬಹುಧ್ರುವೀಯ ವ್ಯವಸ್ಥೆ’ಯತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತ ಹೆಜ್ಜೆ ಹಾಕುತ್ತಿದೆ. ಅಮೆರಿಕದ ಇಂಥ ನಡೆ ಭಾರತದ ಹಿತಾಸಕ್ತಿಗಳಿಗೂ ಹೊಂದಿಕೆಯಾಗುತ್ತದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.

ಬ್ರಿಟನ್ನ ಚಿಂತಕರ ಚಾವಡಿ, ‘ಚಾಥಮ್ ಹೌಸ್’ ಏರ್ಪಡಿಸಿದ್ದ,‘ಭಾರತದ ಉತ್ಥಾನ ಹಾಗೂ ಜಾಗತಿಕ ಮಟ್ಟದಲ್ಲಿ ಅದರ ಪಾತ್ರ’ ಕುರಿತ ಗೋಷ್ಠಿಯಲ್ಲಿ ಅವರು ಈ ಮಾತು ಹೇಳಿದ್ದಾರೆ.

‘ಒಂದು ಉದ್ದೇಶ ಸಾಧನೆಗಾಗಿ ನಾಲ್ಕು ರಾಷ್ಟ್ರಗಳ ಒಕ್ಕೂಟ ‘ಕ್ವಾಡ್’ ರಚಿಸಲಾಗಿದೆ. ಒಪ್ಪಂದದಂತೆ, ಒಕ್ಕೂಟದ ಪಾಲುದಾರ ರಾಷ್ಟ್ರಗಳು ತಮ್ಮ ಪಾಲು ನೀಡುತ್ತವೆ. ಇದು ಅತ್ಯುತ್ತಮ ಮಾದರಿ. ಅಲ್ಲದೇ, ಅಧ್ಯಕ್ಷ ಟ್ರಂಪ್ ಪ್ರಕಾರ ಇದು ದೊಡ್ಡ ಕಾರ್ಯತಂತ್ರವೂ ಆಗಿದೆ’ ಎಂದು ಜೈಶಂಕರ್ ಹೇಳಿದ್ದಾರೆ.

ರಷ್ಯಾ–ಉಕ್ರೇನ್ ಸಂಘರ್ಷ, ಬ್ರಿಕ್ಸ್ ರಾಷ್ಟ್ರಗಳು ಹಾಗೂ ಚೀನಾದೊಂದಿಗೆ ಅವುಗಳ ಸಂಬಂಧ ಸೇರಿದಂತೆ ವಿವಿಧ ಜಾಗತಿಕ ವಿದ್ಯಮಾನಗಳ ಬಗ್ಗೆಯೂ ಜೈಶಂಕರ್ ಭಾರತದ ನಿಲುವುಗಳನ್ನು ಹಂಚಿಕೊಂಡಿದ್ದಾರೆ.

‘ರಷ್ಯಾ ಮತ್ತು ಉಕ್ರೇನ್ ಜೊತೆ ನಿಯಮಿತವಾಗಿ ಮಾತುಕತೆ ನಡೆಸುತ್ತಿರುವ ಕೆಲವೇ ರಾಷ್ಟ್ರಗಳ ಪೈಕಿ ಭಾರತವೂ ಒಂದು. ಯಾವುದೇ ಬಿಕ್ಕಟ್ಟು ಪರಿಹರಿಸುವಲ್ಲಿ ಭಾರತ ತೊಡಗಿಸಿಕೊಳ್ಳಬೇಕು ಎಂಬ ಸನ್ನಿವೇಶ ಸೃಷ್ಟಿಯಾದಾಗಲೆಲ್ಲಾ, ನಾವು ಸ್ಪಂದಿಸಿದ್ದೇವೆ. ಈ ವಿಚಾರದಲ್ಲಿ ನಾವು ಮುಕ್ತ ಮನಸ್ಸು ಹೊಂದಿದ್ದೇವೆ’ ಎಂದು ಹೇಳಿದ್ದಾರೆ.

ಕೆಲ ರಾಷ್ಟ್ರಗಳಿಗೆ ಪ್ರತಿಸುಂಕ ವಿಧಿಸುವ ಟ್ರಂಪ್ ನಿರ್ಧಾರ ಕುರಿತ ಪ್ರಶ್ನೆಗೆ, ‘ವಾಣಿಜ್ಯ ಸಚಿವ ಪೀಯೂಷ್ ಗೋಯೆಲ್ ಅವರು ಸದ್ಯ ವಾಷಿಂಗ್ಟನ್ನಲ್ಲಿದ್ದು, ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಕುರಿತು ಚರ್ಚೆ ನಡೆಸುತ್ತಿದ್ದಾರೆ’ ಎಂದು ಉತ್ತರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.