ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಲಸೆ ನೀತಿ ವಿರೋಧಿ ಗುಂಪಿನ ಪ್ರತಿಭಟನೆ: ಹೊತ್ತಿ ಉರಿದ ಐರ್ಲೆಂಡ್ ರಾಜಧಾನಿ

Published 24 ನವೆಂಬರ್ 2023, 10:04 IST
Last Updated 24 ನವೆಂಬರ್ 2023, 10:04 IST
ಅಕ್ಷರ ಗಾತ್ರ

ಡಬ್ಲಿನ್: ಚಿಕ್ಕಮಕ್ಕಳಿಗೆ ಇರಿದ ಪ್ರಕರಣದಿಂದಾಗಿ ಐರ್ಲೆಂಡ್‌ ರಾಜಧಾನಿಯಲ್ಲಿ ಹಿಂಸಾಚಾರ ಬುಗಿಲೆದ್ದಿದೆ. ಹಿಂಸಾಚಾರದಲ್ಲಿ ವಲಸೆ ನೀತಿ ವಿರೋಧಿ ಗುಂಪಂದು ಅಂಗಡಿಗಳನ್ನು ಲೂಟಿ ಮಾಡಿದ್ದಾರೆ. ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.

ಗಲಭೆಗೆ ಬಲಪಂಥೀಯ ಪ್ರತಿಭಟನಾಕಾರರೇ ಕಾರಣ. ವಲಸೆ ನೀತಿ ವಿರೋಧಿಸಿ ಸಣ್ಣ ಗುಂಪೊಂದು ಪ್ರತಿಭಟನೆ ನಡೆಸಲು ಮುಂದಾಯಿತು. ಈ ಸಂದರ್ಭದಲ್ಲಿ ಇರಿತವಾಗಿದೆ. ಆಗ ಪೊಲೀಸರು ಮತ್ತು ಪ್ರತಿಭಟನಾ ಗುಂಪಿನ ನಡುವೆ ಘರ್ಷಣೆಯೂ ನಡೆದಿದೆ. 

ಗಲಭೆಯನ್ನು ತಹಬದಿಗೆ ತರಲು ಪೊಲೀಸರಿಗೆ ಕೆಲ ಗಂಟೆಗಳೇ ಬೇಕಾಯಿತು. ಸುಮಾರು 200ರಿಂದ 300 ಜನರಿದ್ದ ಗುಂಪು ಡಬ್ಬಲ್ ಡೆಕ್ಕರ್ ಬಸ್, ಟ್ರಾಮ್‌ ಹಾಗೂ ಪೊಲೀಸ್ ಕಾರಿಗೆ ಬೆಂಕಿ ಹಚ್ಚಿದೆ. ಇದರಿಂದ ಪೊಲೀಸ್‌ ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ತಬ್ಧಗೊಂಡಿದೆ ಎಂದು ವರದಿಯಾಗಿದೆ.

ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿರುವ ಟ್ರಾಮ್‌ ಅನ್ನು ರಕ್ಷಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಹಾಸಪಡುತ್ತಿದ್ದಾರೆ. ದಂಗೆ ವೇಳೆ ಹಲವು ಅಂಗಡಿಗಳ ಕಿಟಕಿ ಗಾಜುಗಳನ್ನು ಒಡೆಯಲಾಗಿದೆ. ಹಾಲಿಡೇ ಇನ್‌ ಹೋಟೆಲ್ ಕೂಡಾ ದಾಳಿಗೆ ತುತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಗಾಯಗೊಂಡ ಐದು ವರ್ಷದ ಮಗುವಿಗೆ ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 40 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತ ಯಾವ ರಾಷ್ಟ್ರಕ್ಕೆ ಸೇರಿದವನು ಎಂಬುದು ಪತ್ತೆಯಾಗಿಲ್ಲ. ಭಯೋತ್ಪಾದಕರ ದಾಳಿಯೇ ಎಂಬುದನ್ನೂ ಪತ್ತೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಬಲಪಂಥೀಯ ವಿಚಾರಧಾರೆಯ ಯಾವುದೇ ಜನಪ್ರತಿನಿಧಿ ಸಂಸತ್ತಿಗೆ ಆಯ್ಕೆಯಾಗಿಲ್ಲ. ಆದರೆ ಕಳೆದ ಒಂದು ವರ್ಷದಿಂದ ವಲಸೆ ವಿರೋಧಿ ಪ್ರತಿಭಟನೆಗಳು ಹೆಚ್ಚಾಗಿ ನಡೆಯುತ್ತಿವೆ. ಇದರಿಂದಾಗಿ ಸಂಸತ್‌ ಭವನದ ಸುತ್ತ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT