ಕಂಪಾಲ: ಪೂರ್ವ ಆಫ್ರಿಕಾದ ಉಂಗಾಡಾದಲ್ಲಿ ಎಬೋಲಾ ಮತ್ತೆ ಉಲ್ಬಣಿಸಿದ್ದು,ಈ ವರೆಗೆ 11 ಪ್ರಕರಣಗಳು ದಾಖಲಾಗಿವೆ ಎಂದು ಉಗಾಂಡಾದ ಆರೋಗ್ಯ ಸಚಿವಾಲಯ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ಹೊಸದಾಗಿ ನಾಲ್ಕು ಪ್ರಕರಣಗಳು ದಾಖಲಾಗಿದ್ದು, ದೇಶದಲ್ಲಿ ಎಬೋಲಾ ದೃಢಪಟ್ಟ ಪ್ರಕರಣಗಳ ಸಂಖ್ಯೆ 11 ಕ್ಕೆ ಏರಿದೆ ಎಂದು ಸಚಿವಾಲಯ ಶುಕ್ರವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದೇ ಅವಧಿಯಲ್ಲಿ ಎಬೋಲಾದಿಂದ ಮೂರು ಸಾವುಗಳು ಸಂಭವಿಸಿದ್ದು, ಶಂಕಿತ ಪ್ರಕರಣಗಳು ಸೇರಿದಂತೆ ಒಟ್ಟು ಸಾವಿನ ಸಂಖ್ಯೆ 11ಕ್ಕೆ ಜಿಗಿದಿದೆ.
ಇವುಗಳಲ್ಲಿ ಎಂಟು ಸಾವುಗಳು ಮನೆಗಳಲ್ಲೇ ಸಂಭವಿಸಿದ್ದರೆ, ಮೂರು ಸಾವು ಆಸ್ಪತ್ರೆಯಲ್ಲಿ ಸಂಭವಿಸಿವೆ.
ಎಬೋಲಾ ವೈರಸ್ ಹರಡುವಿಕೆಯ ಮೂಲದ ಕುರಿತು ಪರಿಶೀಲನೆ ನಡೆಸುತ್ತಿರುವುದಾಗಿ ತಜ್ಞರು ಹೇಳಿದ್ದಾರೆ.