ವಾಷಿಂಗ್ಟನ್: ಉಪಾಧ್ಯಕ್ಷರಾಗಿ ಕಮಲಾ ಹ್ಯಾರಿಸ್ ಅವರ ಆಯ್ಕೆಯು ಇಲ್ಲಿನ ಭಾರತ ಸಂಜಾತ ಅಮೆರಿಕನ್ನರ ಪಾಲಿಗೆ ಐತಿಹಾಸಿಕ ಕ್ಷಣವಾಗಿದೆ.

ಅಮೆರಿಕ ಅಧ್ಯಕ್ಷರಾಗಿ ಬಿಡೆನ್ ಮತ್ತು ಉಪಾಧ್ಯಕ್ಷರಾಗಿ ಕಮಲಾ ಅವರು ಬರುವ ಜನವರಿ 20ರಂದು ಪ್ರಮಾಣ ವಚನ ಸ್ವೀಕರಿಸುವರು.

ಕಮಲಾ ಅವರು ಉಪಾಧ್ಯಕ್ಷ ಸ್ಥಾನ ಹೊಂದಲಿರುವ ಪ್ರಥಮ ಭಾರತ ಸಂಜಾತ ಮಹಿಳೆ ಅಲ್ಲದೆ ಪ್ರಥಮ ಕಪ್ಪು ವರ್ಣೀಯ ಮತ್ತು ಆಫ್ರಿಕ ಮೂಲದ ಅಮೆರಿಕದ ಪ್ರಥಮ ಮಹಿಳೆಯೂ ಆಗಿದ್ದಾರೆ.

‘ಕಮಲಾ ಅವರ ಆಯ್ಕೆಯು ಅಮೆರಿಕ ಇತಿಹಾಸದಲ್ಲಿ ದಾಖಲಾಗಲಿದೆ.ಇದು ನಂಬಲು ಅಸಾಧ್ಯ ಎನಿಸುವಂಥದ್ದು’ ಎಂದು ಉತ್ತರ ಕರೊಲಿನಾ ಮೂಲದ ಭಾರತ ಸಂಜಾತ ಅಮೆರಿಕನ್ ಗಣ್ಯ ಪ್ರಜೆ ಸ್ವದೇಶ್ ಚಟರ್ಜಿ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.

ಸ್ವದೇಶ್ ಚಟರ್ಜಿ ಅವರು 1978ರಲ್ಲಿ ಅಮೆರಿಕಕ್ಕೆ ವಲಸೆ ಹೋಗಿದ್ದು 2001ರಲ್ಲಿ ಭಾರತ ಸರ್ಕಾರದಿಂದ ಪದ್ಮ ಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

‘ಕಮಲಾ ಅವರು ಸ್ಯಾನ್‌ಫ್ರಾನ್ಸಿಸ್ಕೊದ ಅಟಾರ್ನಿ ಜನರಲ್ ಆದಾಗಿನಿಂದ ಅವರನ್ನು ಬಲ್ಲೆ. ಅಲ್ಲೂ ಅವರು ಛಾಪು ಮೂಡಿಸಿದ್ದರು. ನಂತರ ಕ್ಯಾಲಿಫೋರ್ನಿಯಾದಿಂದ ಸೆನಟ್‌ಗೆ ಆಯ್ಕೆಯಾಗಿದ್ದರು‘ ಎಂದು ಉದ್ಯಮಿ ಎಂ. ರಂಗಸ್ವಾಮಿ ನೆನೆಪಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.