ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2023ರ ಜುಲೈ ಈವರೆಗಿನ ಹೆಚ್ಚು ಉಷ್ಣತೆಯ ತಿಂಗಳು: ವರದಿ

Published 8 ಆಗಸ್ಟ್ 2023, 13:17 IST
Last Updated 8 ಆಗಸ್ಟ್ 2023, 13:17 IST
ಅಕ್ಷರ ಗಾತ್ರ

ಬ್ರುಸೆಲ್ಸ್‌: 2023ರ ಜುಲೈ ತಿಂಗಳನ್ನು ಭೂಮಿಯ ಮೇಲೆ ಇಲ್ಲಿವರೆಗೆ ದಾಖಲಾಗಿರುವ ಅತಿ ಹೆಚ್ಚು ತಾಪಮಾನದ ತಿಂಗಳು ಎಂದು ಐರೋಪ್ಯ ಒಕ್ಕೂಟದ ಕೋಪರ್ನಿಕಸ್‌ ಕ್ಲೈಮೇಟ್‌ ಚೇಂಜ್‌ ಸರ್ವಿಸ್‌ ಸಂಸ್ಥೆಯು ಅಧಿಕೃತವಾಗಿ ಪ್ರಕಟಿಸಿದೆ.

ಜುಲೈ ತಿಂಗಳ ಜಾಗತಿಕ ಸರಾಸರಿ ತಾಪಮಾನ 16.95 ಡಿಗ್ರಿ ಸೆಲ್ಸಿಯಸ್‌. 2019ರ ನಂತರ ಮೂರು ಬಾರಿ ಗರಿಷ್ಠ ಉಷ್ಣಾಂಶ ದಾಖಲಾಗಿದ್ದು, ಅವುಗಳಲ್ಲಿ 2023ರ ಜುಲೈ  ತಾಪಮಾನವೇ ಅತ್ಯಧಿಕ ಎಂದೂ ಸಂಸ್ಥೆ ಮಂಗಳವಾರ ತಿಳಿಸಿದೆ.

‘ಕಳೆದ ತಿಂಗಳು ಅತಿ ಉಷ್ಣತೆಯಿಂದ ಕೂಡಿತ್ತು. ಇದು 1991ರಿಂದ 2020 ರವರೆಗಿನ ಜುಲೈ ತಿಂಗಳುಗಳ ಸರಾಸರಿಗಿಂತ 0.7 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚು ಬಿಸಿಯಿಂದ ಕೂಡಿತ್ತು’ ಎಂದು ಅದು ಹೇಳಿದೆ.

ಕೋಪರ್ನಿಕಸ್‌ ಸಂಸ್ಥೆ ದಾಖಲಿಸಿರುವ 1940ರ ನಂತರದ ಅಂಕಿ ಅಂಶಗಳು ಹಾಗೂ ಅಮೆರಿಕದ ರಾಷ್ಟ್ರೀಯ ಸಮುದ್ರ ಮತ್ತು ಹವಾಮಾನ ಆಡಳಿತದ (ಎನ್‌ಒಎಎ) ಬಳಿಯಿರುವ 1850ರ ಬಳಿಕದ ಅಂಕಿ ಅಂಶಗಳನ್ನು ಪರಿಶೀಲಿಸಿದರೆ 2023ರ ಜುಲೈ ತಿಂಗಳು ಹೆಚ್ಚು ಉಷ್ಣತೆಯಿಂದ ಕೂಡಿತ್ತು ಎಂದು ಅಧ್ಯಯನ ಹೇಳಿದೆ.

ಆದರೆ ಕೆಲ ವಿಜ್ಞಾನಿಗಳು ಈ ತಾಪಮಾನವು ದೀರ್ಘಕಾಲೀನ ದಾಖಲೆಯಾಗಿದೆ ಎಂದಿದ್ದಾರೆ. 

‘ಇದು, ಸುಮಾರು 10 ಸಾವಿರ ವರ್ಷಗಳಲ್ಲಿಯೇ ಭೂಮಿಯ ಮೇಲಿನ ಅತ್ಯಂತ ಹೆಚ್ಚಿನ ಉಷ್ಣತೆಯ ತಿಂಗಳು’ ಎಂದು ಜರ್ಮನಿಯ ಪಾಟ್ಸ್‌ಡ್ಯಾಮ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಕ್ಲೈಮೆಟ್‌ ರಿಸರ್ಚ್‌ನ ಹವಾಮಾನ ವಿಜ್ಞಾನಿ ಸ್ಪೀಫನ್‌ ರಹ್ಮ್‌ಸ್ಟೋರ್ಫ್‌ ಹೇಳಿದ್ದಾರೆ. ಆದರೆ ಅವರು ಕೋಪರ್ನಿಕಸ್‌ ತಂಡದಲ್ಲಿಲ್ಲ.

ಕಳೆದ ತಿಂಗಳು ಅಮೆರಿಕದ ನೈರುತ್ಯ ಭಾಗ, ಮೆಕ್ಸಿಕೊ, ಯುರೋಪ್‌ ಮತ್ತು ಏಷ್ಯಾದ ಕೆಲ ಭಾಗಗಳಲ್ಲಿ ಅತಿಯಾದ ಬಿಸಿಗಾಳಿ ಉಂಟಾಗಿತ್ತು. ಕಲ್ಲಿದ್ದಲು, ತೈಲ ಮತ್ತು ನೈಸರ್ಗಿಕ ಅನಿಲದ ಸುಡುವಿಕೆಯಿಂದ ಹವಾಮಾನದ ಮೇಲೆ ಆಗುತ್ತಿರುವ ವ್ಯತಿರಿಕ್ತ ಪರಿಣಾಮ ಇದಕ್ಕೆ ಕಾರಣ ಎಂದು ಅಧ್ಯಯನಗಳು ದೂರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT