ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರ್ಜ್‌ಫ್ಲಾಯ್ಡ್‌ ಹತ್ಯೆ ಪ್ರಕರಣ: 4ನೇ ಮಾಜಿ ಅಧಿಕಾರಿ ಅಪರಾಧಿ

Published 2 ಮೇ 2023, 18:37 IST
Last Updated 2 ಮೇ 2023, 18:37 IST
ಅಕ್ಷರ ಗಾತ್ರ

ಮಿನಿಯಾಪೋಲಿಸ್‌ : ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಎಂಬಾತನ ಹತ್ಯೆಗೆ ಕುಮ್ಮಕ್ಕು ನೀಡಿದ ಪ್ರಕರಣದಲ್ಲಿ ಮಿನಿಯಾಪೋಲಿಸ್‌ನ ಮಾಜಿ ಪೊಲೀಸ್‌ ಅಧಿಕಾರಿ ಟೌ ಥಾವೊ ಕೂಡ ಅಪರಾಧಿ ಎಂದು ಕೋರ್ಟ್‌ ತೀರ್ಪು ನೀಡಿದೆ.  

ಎರಡೂ ಕಡೆಯವರ ವಾದ– ಪ್ರತಿವಾದ, ಲಿಖಿತ ಸಾಕ್ಷ್ಯಗಳನ್ನು ಪರಿಶೀಲಿಸಿದ ಹೆನ್ನೆಪಿನ್‌ ಕೌಂಟಿ ನ್ಯಾಯಾಧೀಶ ಪೀಟರ್‌ ಕ್ಯಾಹಿಲ್‌ ಅವರು ಸೋಮವಾರ ಈ ತೀರ್ಪು ನೀಡಿದ್ದು, ಮಂಗಳವಾರ ಆದೇಶ ಹೊರಬಿದ್ದಿದೆ. ಥಾವೊ ಸುಮಾರು ಒಂಬತ್ತು ವರ್ಷಗಳ ಸೇವಾ ಅನುಭವದ ಹೊರತಾಗಿಯೂ ಕೃತ್ಯ ನಡೆಯುವಾಗ ಧೈರ್ಯ ಮತ್ತು ಕರುಣೆ ತೋರಿಸಲಿಲ್ಲವೆಂದು ಪ್ರಾಸಿಕ್ಯೂಟರ್‌ಗಳು ತಮ್ಮ ವಾದ ಮಂಡಿಸಿದ್ದರು.     

ಫ್ಲಾಯ್ಡ್‌ ಹತ್ಯೆ ಪ್ರಕರಣದಲ್ಲಿ ಫ್ಲಾಯ್ಡ್‌ನ ನಾಗರಿಕ ಹಕ್ಕುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಟೌ ಥಾವೊ ಅಪರಾಧಿ ಎಂದು ಈಗಾಗಲೇ ಫೆಡರಲ್ ಕೋರ್ಟ್ ತೀರ್ಪು ನೀಡಿತ್ತು. ಈ ಪ್ರಕರಣದಲ್ಲಿ ಭಾಗಿಯಾದ ನಾಲ್ಕು ಮಾಜಿ ಅಧಿಕಾರಿಗಳ ಪೈಕಿ ಟೌ ಥಾವೊ ಕೊನೆಯವನು.

2020ರ ಮೇ 25ರಂದು ಮಾಜಿ ಪೊಲೀಸ್ ಅಧಿಕಾರಿ ಡೆರೆಕ್‌ ಚೌವಿನ್‌ ಎಂಬಾತ ಜಾರ್ಜ್‌ಫ್ಲಾಯ್ಡ್‌ನ ಕುತ್ತಿಗೆಯನ್ನು ಮಂಡಿಯಿಂದ ನೆಲಕ್ಕೆ ಒಂಬತ್ತೂವರೆ ನಿಮಿಷಗಳ ಕಾಲ ಒತ್ತಿಹಿಡಿದು ಹತ್ಯೆ ಮಾಡುವಾಗ, ಫ್ಲಾಯ್ಡ್‌ ರಕ್ಷಿಸಲು ಮುಂದಾದವರನ್ನು ತಡೆದ ಆರೋಪ ಟೌ ಥಾವೊ ಮೇಲಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT