ನ್ಯೂಯಾರ್ಕ್: 2008ರಲ್ಲಿಅಮೆರಿಕದ ಪತ್ರಕರ್ತನನ್ನು ಅಪಹರಿಸಿ, ಪಾಕಿಸ್ತಾನದಲ್ಲಿ ಹಲವು ತಿಂಗಳುಗಳ ಕಾಲ ಬಂಧನದಲ್ಲಿಟ್ಟಿದ್ದತಾಲಿಬಾನ್ನ ಮಾಜಿ ಕಮಾಂಡರ್ ಒಬ್ಬನ ವಿರುದ್ಧ ಹಲವು ಸೈನಿಕರನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷೋರೋಪ ಹೊರಿಸಲಾಗಿದೆ.

ಹಾಜಿ ನಜಿಬುಲ್ಲಾಅಲಿಯಾಸ್ ನಜೀಬುಲ್ಲಾ ನಯೀಮ್ (45) ಎಂಬಾತನ ವಿರುದ್ಧ ಈ ದೋಷಾರೋಪ ಸಿದ್ಧಪಡಿಸಲಾಗಿದ್ದು,ಫೆಡರಲ್ ನ್ಯಾಯಾಲಯ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.

ಕಳೆದ ವರ್ಷ ಈತನನ್ನು ಬಂಧಿಸಿ, ಉಕ್ರೇನ್ನಿಂದ ಅಮೆರಿಕಕ್ಕೆ ಹಸ್ತಾಂತರಿಸಲಾಗಿತ್ತು. 2008ರಲ್ಲಿ ಅಫ್ಗಾನಿಸ್ತಾನದಲ್ಲಿಈತನ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಅಮೆರಿಕದ ಮೂವರು ಸೈನಿಕರು, ಅವರ ಅಫ್ಗನ್ ಭಾಷಾಂತರಕಾರ ಮೃತಪಟ್ಟಿದ್ದರು. ಅಮೆರಿಕದ ಸೇನಾ ಹೆಲಿಕಾಪ್ಟರ್ ಹೊಡೆದುರುಳಿಸಿದ ಆರೋಪವೂ ಈತನ ಮೇಲೆ ಇದೆ.

ದೋಷಾರೋಪದಲ್ಲಿ ಅಪಹೃತ ಅಮೆರಿಕದ ಪತ್ರಕರ್ತನ ಹೆಸರು ಉಲ್ಲೇಖವಾಗಿಲ್ಲ. ಆದರೆ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಎರಡು ಬಾರಿ ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ ಡೇವಿಡ್ ರೋಡೆ ಅವರೇ ಈ ಪತ್ರಕರ್ತ ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.