ನ್ಯೂಯಾರ್ಕ್: 2017ರಲ್ಲಿ ಅಮೆರಿಕದ ನ್ಯೂಜೆರ್ಸಿಯಲ್ಲಿ ಭಾರತೀಯ ಮಹಿಳೆ ಹಾಗೂ ಆಕೆಯ 6 ವರ್ಷದ ಪುತ್ರನನ್ನು ಹತ್ಯೆಗೈದು ಪರಾರಿಯಾಗಿರುವ ಆರೋಪ ಎದುರಿಸುತ್ತಿರುವ ಭಾರತೀಯ ವ್ಯಕ್ತಿಗಾಗಿ ಅಮೆರಿಕದ ತನಿಖಾ ಸಂಸ್ಥೆ ಎಫ್ಬಿಐ ಹುಡುಕಾಟ ನಡೆಸುತ್ತಿದೆ. ಆರೋಪಿಯ ಸುಳಿವು ನೀಡಿದವರಿಗೆ ₹45 ಲಕ್ಷ ಬಹುಮಾನ ನೀಡುವುದಾಗಿಯೂ ಘೋಷಿಸಿದೆ.

‘ಆರೋಪಿಯನ್ನು ನಸೀರ್ ಹಮೀದ್ (38) ಎಂದು ಗುರುತಿಸಲಾಗಿದ್ದು, ಈತ 2017ರ ಮಾರ್ಚ್ನಲ್ಲಿ ಶಶಿಕಲಾ ನಾರ್ರಾ ಹಾಗೂ ಅವರ ಪುತ್ರ ಅನಿಶ್ ನಾರ್ರಾ ಎಂಬುವವರನ್ನು ಹತ್ಯೆ ಮಾಡಿದ್ದಾನೆ. ಶಶಿಕಲಾ ಅವರ ಪತಿ ಹನುಮಂತ ನಾರ್ರಾ ಅವರನ್ನು ಆರೋಪಿ ಹಿಂಬಾಲಿಸುತ್ತಿದ್ದ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಹತ್ಯೆ ನಡೆದ 6 ತಿಂಗಳ ಬಳಿಕ ಆರೋಪಿ ಭಾರತಕ್ಕೆ ಹಿಂದಿರುಗಿದ್ದಾನೆ’ ಎಂದು ಎಫ್ಬಿಐ ತಿಳಿಸಿದೆ.

‘ಹತ್ಯೆಗೆ ಸಂಬಂಧಿಸಿದಂತೆ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಆತನನ್ನು ಅಮೆರಿಕಕ್ಕೆ ಕರೆತಂದು ಕಾನೂನು ಪ್ರಕ್ರಿಯೆಗಳಿಗೆ ಒಳಪಡಿಸಬೇಕಿದೆ. ಹೀಗಾಗಿ ಆತನ ಹಸ್ತಾಂತರಕ್ಕೆ ನೆರವು ನೀಡಿ’ ಎಂದು ಭಾರತೀಯ ರಾಯಭಾರ ಕಚೇರಿಗೂ ಎಫ್ಬಿಐ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.