ಸುವಾ: ಫಿಜಿ ದೇಶಕ್ಕೆ ತೆರಳಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಲ್ಲಿಯ ನಾಡಿ ಪ್ರದೇಶದಲ್ಲಿರುವ ಪುರಾತನ ದೇವಾಲಯ ಶ್ರೀ ಶಿವ ಸುಬ್ರಹ್ಮಣ್ಯ ಸ್ವಾಮಿ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಇದಕ್ಕೂ ಮೊದಲು ಫಿಜಿಯಲ್ಲಿರುವ ಭಾರತೀಯ ಸಮುದಾಯದವರೊಂದಿಗೆ ಸಂವಾದ ನಡೆಸಿದ ಮುರ್ಮು, ‘ಈ ದ್ವೀಪ ರಾಷ್ಟ್ರದಲ್ಲಿರುವ ಭಾರತೀಯ ಸಮುದಾಯಗಳ ಪಾತ್ರ ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದರು. ವಿದೇಶಗಳಿಗೆ ಭೇಟಿಯಿತ್ತಾಗ ಭಾರತೀಯ ಮೂಲದವರನ್ನು ಭೇಟಿಯಾಗುವುದು ವಿಶೇಷ ಅನುಭವವನ್ನು ನೀಡುತ್ತದೆ. ಭಾರತ ಮತ್ತು ಫಿಜಿ ದೇಶದ ನಂಟು 145 ವರ್ಷಗಳಷ್ಟು ಹಳೆಯದು. ಈ ಜಾಗದಲ್ಲಿ ಭಾರತೀಯರನ್ನು ಭೇಟಿಯಾಗುತ್ತಿರುವುದು ಖುಷಿ ನೀಡಿದೆ’ ಎಂದಿದ್ದಾರೆ.
ಇಂದು ಮುರ್ಮು ಅವರು ಫಿಜಿಯಿಂದ ನ್ಯೂಜಿಲ್ಯಾಂಡ್‌ಗೆ ತೆರಳಲಿದ್ದಾರೆ.