ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ತಾಂಬುಲ್ | ನೈಟ್‌ಕ್ಲಬ್‌ನಲ್ಲಿ ಅಗ್ನಿ ಅವಘಡ: 29 ಸಾವು

Published 2 ಏಪ್ರಿಲ್ 2024, 15:53 IST
Last Updated 2 ಏಪ್ರಿಲ್ 2024, 15:53 IST
ಅಕ್ಷರ ಗಾತ್ರ

ಇಸ್ತಾಂಬುಲ್(ಟರ್ಕಿ): ನಗರದ ದಿ ಮಾಸ್ಕರೇಡ್‌ ಎಂಬ ನೈಟ್‌ಕ್ಲಬ್‌ನಲ್ಲಿ ನವೀಕರಣ ಕಾರ್ಯ ನಡೆಯುತ್ತಿದ್ದ ವೇಳೆ ಮಂಗಳವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಕನಿಷ್ಠ 29 ಮಂದಿ ಮೃತಪಟ್ಟಿದ್ದಾರೆ.

‘ಈ ಘಟನೆಯಲ್ಲಿ ಗಾಯಗೊಂಡಿದ್ದ ಒಬ್ಬ ವ್ಯಕ್ತಿಗೆ ಚಿಕಿತ್ಸೆ ನೀಡಲಾಗಿದೆ. ನೈಟ್‌ಕ್ಲಬ್‌ ವ್ಯವಸ್ಥಾಪಕರು ಸೇರಿದಂತೆ ಐವರನ್ನು‌ ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಲಾಗುತ್ತಿದೆ’ ಎಂದು ಕಾನೂನು ಸಚಿವ ಯಿಲ್ಮಜ್‌ ಟಂಕ್‌ ತಿಳಿಸಿದ್ದಾರೆ.

‘ತನಿಖೆ ಬಳಿಕ, ಅಗ್ನಿ ದುರಂತಕ್ಕೆ ಕಾರಣ ತಿಳಿಯಲಿದೆ’ ಎಂದು ಇಸ್ತಾಂಬಲ್‌ ಗವರ್ನರ್ ದವುತ್‌ ಗುಲ್‌ ತಿಳಿಸಿದ್ದಾರೆ.

ನಗರದ ಬೆಸಿಕ್ತಾಸ್‌ ಪ್ರದೇಶದಲ್ಲಿರುವ 16 ಅಂತಸ್ತಿನ ಜನವಸತಿ ಕಟ್ಟಡದ ನೆಲಮಹಡಿಯಲ್ಲಿ ಈ ನೈಟ್‌ಕ್ಲಬ್‌ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT