ಲಾಸ್ವೆಗಾಸ್: ಭಾರತದ ಕುಲದೀಪ್ ಕುಮಾರ್ (35) ಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಐವರು ಭಾರತೀಯರ ವಿರುದ್ಧ ಅಮೆರಿಕದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ನ್ಯೂಯಾರ್ಕ್ನ ಸೌತ್ ಓಜೋನ್ ಪಾರ್ಕ್ನ ಸಂದೀಪ್ ಕುಮಾರ್ (34) ವಿರುದ್ಧ ಕೊಲೆ ಹಾಗೂ ಕೊಲೆಗೆ ಪಿತೂರಿ ನಡೆಸಿದ ಸಂಬಂಧ ದೋಷಾರೋಪ ಹೊರಿಸಲಾಗಿದೆ ಎಂದು ಓಷನ್ ಕೌಂಟಿಯ ಪ್ರಾಸಿಕ್ಯೂಟರ್ ಬ್ರಾಡ್ಲಿ ಬಿಲ್ಹೈಮರ್ ಹಾಗೂ ನ್ಯೂಜೆರ್ಸಿ ರಾಜ್ಯ ಪೊಲೀಸ್ ಅಧೀಕ್ಷಕ ಕರ್ನಲ್ ಪ್ಯಾಟ್ರಿಕ್ ಕ್ಯಾಲಹನ್ ತಿಳಿಸಿದ್ದಾರೆ.

ಸಂದೀಪ್ ಅವರು ಕುಲದೀಪ್ ಕೊಲೆಗೆ ಸಂಬಂಧಿಸಿದಂತೆ ಇತರರೊಂದಿಗೆ ಕೈಜೋಡಿಸಿದ್ದಾರೆ ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಸೌರವ್ ಕುಮಾರ್ (23), ಗೌರವ್ ಸಿಂಗ್ (27), ನಿರ್ಮಲ್ ಸಿಂಗ್ (30) ಹಾಗೂ ಗುರ್ದೀಪ್ ಸಿಂಗ್ (22) ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಇವರೆಲ್ಲರೂ ಇಂಡಿಯಾನಾದ ಗ್ರೀನ್ವುಡ್ನವರು.

ಮ್ಯಾಂಚೆಸ್ಟರ್ ಟೌನ್ಶಿಪ್ನಲ್ಲಿ 2024ರ ಅ.22ರಂದು ಕುಲದೀಪ್ ಕುಮಾರ್ ಕೊಲೆಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.