ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೆಸಿಫಿಕ್ ಪ್ರದೇಶದಲ್ಲಿ ಸಹಕಾರ, ಜಾಗತಿಕ ವಿಚಾರಗಳ ಕುರಿತು ಭಾರತ–ಜಪಾನ್ ಚರ್ಚೆ

Published 8 ಫೆಬ್ರುವರಿ 2024, 15:10 IST
Last Updated 8 ಫೆಬ್ರುವರಿ 2024, 15:10 IST
ಅಕ್ಷರ ಗಾತ್ರ

ಟೋಕಿಯೊ: ಭಾರತದ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಅವರು ಜಪಾನಿನ ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಗಳನ್ನು ಗುರುವಾರ ಭೇಟಿ ಮಾಡಿ ಪ್ರಾದೇಶಿಕ ಪರಿಸ್ಥಿತಿ, ಇಂಡೊ–ಪೆಸಿಫಿಕ್ ಪ್ರದೇಶದಲ್ಲಿ ಭಾರತ–ಜಪಾನ್ ಸಹಕಾರ, ಎರಡೂ ದೇಶಗಳ ಹಿತಾಸಕ್ತಿಗಳಿಗೆ ಸಂಬಂಧಿಸಿದ ಜಾಗತಿಕ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.

ಕ್ವಾತ್ರಾ ಅವರು ಜಪಾನಿನ ಉಪ ವಿದೇಶಾಂಗ ಸಚಿವ ಮಸಾತಾಕಾ ಒಕಾನೊ ಅವರನ್ನು ಭೇಟಿ ಮಾಡಿದರು. ಭೇಟಿಯ ಸಂದರ್ಭದಲ್ಲಿ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ, ಹತ್ತು ವರ್ಷಗಳ ವಿಶೇಷವಾದ ದೀರ್ಘಕಾಲೀನ ಸಂಬಂಧ ಹಾಗೂ ಜಾಗತಿಕ ಪಾಲುದಾರಿಕೆ ಬಗ್ಗೆ ಮಾತುಕತೆ ನಡೆಯಿತು ಎಂದು ಜಪಾನ್‌ನಲ್ಲಿ ಇರುವ ಭಾರತದ ರಾಯಭಾರ ಕಚೇರಿಯು ‘ಎಕ್ಸ್’ ವೇದಿಕೆಯ ಮೂಲಕ ತಿಳಿಸಿದೆ.

ಕ್ವಾತ್ರಾ ಅವರು ವಿದೇಶಾಂಗ ವ್ಯವಹಾರಗಳ ಹಿರಿಯ ಉಪ ಸಚಿವ ತಕೆಹಿರೊ ಫುನಕೋಶಿ ಅವರನ್ನು ಕೂಡ ಭೇಟಿ ಮಾಡಿದರು. ಪ್ರಾದೇಶಿಕ ಪರಿಸ್ಥಿತಿ ಹಾಗೂ ಎರಡೂ ದೇಶಗಳ ಪಾಲಿಗೆ ಮಹತ್ವವಾಗಿರುವ ಸಂಗತಿಗಳ ಬಗ್ಗೆ ಚರ್ಚಿಸಿದರು.

ಸೆಮಿಕಂಡಕ್ಟರ್‌ಗಳನ್ನು ಪಾಲುದಾರಿಕೆಯಲ್ಲಿ ತಯಾರಿಸಲು ಭಾರತದಲ್ಲಿ ಇರುವ ಅವಕಾಶಗಳ ಬಗ್ಗೆ ಕ್ವಾತ್ರಾ ಅವರು ರ್‍ಯಾಪಿಡಸ್‌ನ ಚೇರ್ಮನ್ ತೆತ್ಸುರೊ ಹಿಗಾಶಿ ಮತ್ತು ಅಧ್ಯಕ್ಷ ಅತ್ಸುಯೊಶಿ ಕೊಯಿಕೆ ಅವರ ಜೊತೆ ಚರ್ಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT