ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌: ವಿದೇಶಿ ಸಂಸ್ಥೆಗಳ ನೇಮಕಾತಿ ನಿಯಮ ಸಡಿಲಿಕೆ

Published 28 ಏಪ್ರಿಲ್ 2024, 13:50 IST
Last Updated 28 ಏಪ್ರಿಲ್ 2024, 13:50 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ವಿದೇಶಿ ಸಂಸ್ಥೆಗಳನ್ನು ನೇಮಿಸಿಕೊಳ್ಳಲು ಈಗಿರುವ ನಿಯಮಗಳನ್ನು ಪಾಕಿಸ್ತಾನ ಸಚಿವ ಸಂಪುಟ ಸಡಿಲಗೊಳಿಸಿದೆ.

ಕೌಶಲರಹಿತ ಅಧಿಕಾರಿಗಳ ಬದಲು ವಿದೇಶಿ ಪ್ರತಿಭೆ ಮನ್ನಣೆ ನೀಡುವುದು ಮತ್ತು ವಿವಿಧ ಯೋಜನೆಗಳಿಗೆ ಕೊಲ್ಲಿ ಮತ್ತು ಇತರ ರಾಷ್ಟ್ರಗಳಿಂದ ಹೆಚ್ಚು ಹೂಡಿಕೆಯನ್ನು ಆಕರ್ಷಿಸುವುದು ಈ ಯೋಜನೆಯ ಉದ್ದೇಶವಾಗಿದೆ.

‘ವಿದೇಶಿ ಹೂಡಿಕೆಯನ್ನು ಆಕರ್ಷಿಸಲು ಕಳೆದ ವರ್ಷ ನಾಗರಿಕ ಸೇನಾ ಸಂಸ್ಥೆ ರಚಿಸಿದ್ದ ವಿಶೇಷ ಹೂಡಿಕೆ ಸೌಕರ್ಯ ಮಂಡಳಿಗೆ(ಎಸ್‌ಐಎಫ್‌ಸಿ) ಉತ್ತೇಜನ ನೀಡಲು ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಎಕ್ಸ್‌ಪ್ರೆಸ್‌ ಟ್ರಿಬ್ಯುನ್‌ ಪತ್ರಿಕೆ ವರದಿ ಮಾಡಿದೆ. 

‘ಯೋಜನೆಯನ್ನು ರೂಪಿಸಲು ಮತ್ತು ಅನುಷ್ಠಾನಗೊಳಿಸಲು ವಿಫಲವಾಗಿರುವ ಪಾಕಿಸ್ತಾನಿ ಅಧಿಕಾರಿಗಳ ಬದಲು ಈ ವಿದೇಶಿ ಸಂಸ್ಥೆಗಳನ್ನು ಐದು ವರ್ಷಗಳ ಅವಧಿಗೆ ನೇಮಿಸಿಕೊಳ್ಳಲಾಗುತ್ತಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಧಿಕಾರಿಗಳ ವೈಫಲ್ಯಗಳ ಬಗ್ಗೆ ಎಸ್‌ಐಎಫ್‌ಸಿಯು ಸರ್ಕಾರಕ್ಕೆ ತಿಳಿಸಿದ್ದು, ಹೀಗಾಗಿ, ಸಚಿವಸಂಪುಟವು ಕೆಲ ನಿಯಮಗಳನ್ನು ಸಡಿಲಿಸಿದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT