ವುಹಾನ್: ಚೀನಾದಲ್ಲಿ ಮಾರಕ ಕೊರೊನಾ ವೈರಸ್‌ನಿಂದಾಗಿ ಮೃತಪಟ್ಟವರ ಸಂಖ್ಯೆಯು 41ಕ್ಕೆ ಏರಿಕೆಯಾಗಿದೆ.

ಅಧಿಕಾರಿಗಳು ಇನ್ನೂ 15 ಸಾವುಗಳು ಮತ್ತು 180 ಹೊಸ ಕರೋನ ವೈರಸ್ ಪ್ರಕರಣಗಳನ್ನು ದೃಢಪಡಿಸಿದ್ದು, ಅವುಗಳಲ್ಲಿ 77 ಪ್ರಕರಣಗಳು ವುಹಾನ್ ನಗರದಲ್ಲಿ ಕಂಡುಬಂದಿವೆ.ಇದುವರೆಗೂ ಒಟ್ಟು 41 ಜನರು ಮೃತಪಟ್ಟಿದ್ದು, 1,000ಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ.

ಮೊದಲಿಗೆ ವೈರಸ್ ಕಾಣಿಸಿಕೊಂಡಿದ್ದ ವುಹಾನ್‌ನಲ್ಲಿಯೇ ಅತಿ ಹೆಚ್ಚು ಜನ ಮೃತಪಟ್ಟಿದ್ದಾರೆ ಎಂದು ಹುಬೈ ಆರೋಗ್ಯ ಆಯೋಗ ತಿಳಿಸಿದೆ.

ದೇಶದಾದ್ಯಂತ ಮತ್ತು ಇತರೆ ಹಲವಾರು ರಾಷ್ಟ್ರಗಳಿಗೆ ಸೋಂಕು ಹರಡಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಸೋಂಕು ಹರಡುವುದನ್ನು ತಪ್ಪಿಸಲು ವುಹಾನ್ ಮತ್ತು ಇತರ 13 ನಗರಗಳಲ್ಲಿ ಜನರು ಮತ್ತು ವಾಹನಗಳ ಸಂಚಾರದ ಮೇಲಿನ ನಿರ್ಬಂಧವನ್ನು ಚೀನಾ ವಿಸ್ತರಿಸಿದೆ. ಇದರಿಂದ ಸುಮಾರು 36 ದಶಲಕ್ಷ ಜನರು ಪರಿತಪಿಸುವಂತಾಗಿದೆ.

ಇದನ್ನೂ ಓದಿ:ವೈರಸ್: ಚೀನಾದ 13 ನಗರಗಳಲ್ಲಿ ನಿರ್ಬಂಧ, ಸಂಕಷ್ಟಕ್ಕೆ ಸಿಲುಕಿದ ನಾಗರಿಕರು

ದಕ್ಷಿಣ ಕೊರಿಯಾ, ಜಪಾನ್, ಸಿಂಗಾಪುರ್, ಹಾಂಗ್ ಕಾಂಗ್, ಮಕಾವೊ, ತೈವಾನ್, ಅಮೆರಿಕ, ಥಾಯ್ಲೆಂಡ್ ಮತ್ತು ವಿಯೆಟ್ನಾಂನಾದ್ಯಂತ ಪ್ರಕರಣಗಳು ವರದಿಯಾಗಿವೆ. ಶುಕ್ರವಾರ ಯುರೋಪಿನಲ್ಲಿ ಮೊದಲ ಪ್ರಕರಣ ವರದಿಯಾಗಿದ್ದು, ಫ್ರಾನ್ಸ್ ಕೂಡ ಮೂರು ಪ್ರಕರಣಗಳನ್ನು ಗುರುತಿಸಿರುವುದಾಗಿ ಹೇಳಿದೆ.

ಸದ್ಯ ಚೀನಾದಲ್ಲಿ ಪ್ರಮುಖ ಹಬ್ಬವಾದ ಚಂದ್ರನ ಹೊಸ ವರ್ಷದ ರಜಾದಿನವನ್ನು ಸಂಭ್ರಮಿಸಲು ದೇಶಾದ್ಯಂತ ಅಥವಾ ವಿದೇಶಗಳಲ್ಲಿರುವ ಲಕ್ಷಾಂತರ ಜನರು ಪ್ರಯಾಣ ಕೈಗೊಂಡಿರುವಾಗ ಮಾರಕ ವೈರಸ್ ಪತ್ತೆಯಾಗಿದ್ದು, ಚೀನಾಕ್ಕೆ ಅತ್ಯಂತ ಕೆಟ್ಟ ಸಮಯವಾಗಿ ಮಾರ್ಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.