ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲಿ ಪೆನ್‌ ಅಭಿಯಾನಕ್ಕೆ ನೆರವು: ತನಿಖೆ ಆರಂಭ

Published 9 ಜುಲೈ 2024, 14:28 IST
Last Updated 9 ಜುಲೈ 2024, 14:28 IST
ಅಕ್ಷರ ಗಾತ್ರ

ಪ್ಯಾರಿಸ್‌: ಬಲಪಂಥೀಯ ನಾಯಕಿ ಮರೀನ್‌ ಲಿ ಪೆನ್‌ ಅವರು 2022ರ ಅಧ್ಯಕ್ಷೀಯ ಚುನಾವಣೆ ವೇಳೆ ನಡೆಸಿದ ಅಭಿಯಾನಕ್ಕೆ ಅಕ್ರಮವಾಗಿ ಹಣಕಾಸು ನೆರವು ನೀಡಿದ ಆರೋಪದ ಬಗ್ಗೆ ಕಳೆದ ವಾರ ಪ್ರಾಥಮಿಕ ತನಿಖೆ ಆರಂಭಿಸಲಾಗಿದೆ ಎಂದು ಸರ್ಕಾರಿ ವಕೀಲರ ಕಚೇರಿ ಮಂಗಳವಾರ ತಿಳಿಸಿದೆ.

ಸಾಲದ ಸ್ವೀಕಾರ, ಆಸ್ತಿಯ ದುರ್ಬಳಕೆ, ವಂಚನೆ ಮತ್ತು ಖೊಟ್ಟಿ ದಾಖಲೆ ಸೃಷ್ಟಿ ಆರೋಪದ ಬಗ್ಗೆ ಜುಲೈ 2ರಿಂದ ನ್ಯಾಯಾಂಗ ತನಿಖೆ ಆರಂಭಿಸಲಾಗಿದೆ. 

ಲಿ ಪೆನ್‌ ಅವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಅಭ್ಯರ್ಥಿಗಳ ಖರ್ಚಿನ ಮೇಲೆ ನಿಗಾ ವಹಿಸುವ ‘ನ್ಯಾಷನಲ್‌ ಕಮಿಷನ್‌ ಫಾರ್‌ ಕ್ಯಾಂಪೇನ್‌ ಅಕೌಂಟ್ಸ್‌ ಆ್ಯಂಡ್‌ ಪೊಲಿಟಿಕಲ್‌ ಫಿನಾನ್ಸ್‌’ ವರದಿ ನೀಡಿದ ನಂತರ ಪ್ರಾಥಮಿಕ ತನಿಖೆ ಆರಂಭಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT