ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಯೆರ್ರಾ ಲಿಯೋನ್‌: ಇಂಧನ ಟ್ಯಾಂಕರ್ ಸ್ಫೋಟ 91 ಜನರು ಸಾವು

Last Updated 6 ನವೆಂಬರ್ 2021, 11:42 IST
ಅಕ್ಷರ ಗಾತ್ರ

ಸಿಯೆರ್ರಾ ಲಿಯೋನ್: ಸಿಯೆರ್ರಾ ಲಿಯೋನ್‌ನ ರಾಜಧಾನಿ ಫ್ರೀಟೌನ್‌ನಲ್ಲಿ ಗುರುವಾರ ಇಂಧನ ಟ್ಯಾಂಕರ್‌ ಸ್ಫೋಟಗೊಂಡು ಸಂಭವಿಸಿದ ಅವಘಡದಲ್ಲಿ ಕನಿಷ್ಠ 91 ಜನರು ಮೃತಪಟ್ಟಿದ್ದಾರೆ.

ಮೃತರ ಸಂಖ್ಯೆಯನ್ನು ಸರ್ಕಾರ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೆ, ಸ್ಥಳೀಯ ಅಧಿಕಾರಿಗಳು ಕನಿಷ್ಠ 91 ಶವಗಳನ್ನು ಗುರುತಿಸಿರುವುದ‌ನ್ನು ದೃಢಪಡಿಸಿದ್ದಾರೆ.

ಜಖಂಗೊಂಡಿದ್ದ ಟ್ಯಾಂಕರ್‌ನಿಂದ ಸೋರಿಕೆಯಾಗುತ್ತಿದ್ದ ಇಂಧನವನ್ನು ಸಂಗ್ರಹಿಸಲು ಮುಗಿಬಿದ್ದಿದ್ದ ಸಾರ್ವಜನಿಕರು ಮೃತರಲ್ಲಿ ಸೇರಿದ್ದಾರೆ ಎಂದು ಅಧಿಕಾರಿ ಮೇರ್ ವೊನ್ನೆ ಅಕಿ ಸಾಯೆರ್ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

‘ಹಲವರು ಗಾಯಗೊಂಡಿದ್ದಾರೆ. ಕೆಲವರು ಜೀವಂತವಾಗಿ ಸುಟ್ಟುಹೋಗಿದ್ದಾರೆ. ಇದೊಂದು ಭೀಕರ ಅವಘಡ’ ಎಂದು ರಾಷ್ಟ್ರೀಯ ವಿಕೋಪ ನಿರ್ವಹಣಾ ಸಂಸ್ಥೆಯ ಅಧಿಕಾರಿ ಬ್ರಿಮಾ ಬುರೆ ಸೆಸೆ ಪ್ರತಿಕ್ರಿಯಿಸಿದ್ದಾರೆ.

ಸಿಯೆರ್ರಾ ಲಿಯೋನ್ ಅಧ್ಯಕ್ಷ ಜುಲಿಯಸ್‌ ಮಾಡಾ ಬಯೊ ಅವರೂ ದುರಂತ ಕುರಿತು ಟ್ವೀಟ್‌ ಮಾಡಿದ್ದು, ಬಾಧಿತ ಕುಟುಂಬಗಳಿಗೆ ಸರ್ಕಾರ ನೆರವು ನೀಡಲಿದೆ ಎಂದು ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT