ಲಂಡನ್:70 ವರ್ಷಗಳ ಹಿಂದೆ ಜಾರ್ಜ್ ಆರ್ವೆಲ್ ಅವರು ಬರೆದ ಅಡುಗೆ ತಯಾರಿ ಕುರಿತ ಅದ್ಭುತ ಪ್ರಬಂಧವನ್ನು ಪ್ರಕಟಿಸಲು ನಿರಾಕರಿಸಿದ್ದಕ್ಕೆ ಬ್ರಿಟಿಷ್ ಕೌನ್ಸಿಲ್ ಈಗ ಅವರ ಕ್ಷಮೆ ಕೋರಿದೆ.

ಬ್ರಿಟಿಷರ ಅವಧಿಯಲ್ಲಿ ಭಾರತದಲ್ಲಿ ಜನಿಸಿದ್ದ ಆರ್ವೆಲ್ ಅವರು 20ನೇ ಶತಮಾನದ ಬ್ರಿಟನ್‌ನ ಪ್ರಖ್ಯಾತ ಲೇಖಕರಲ್ಲಿ ಒಬ್ಬರೆನಿಸಿದ್ದಾರೆ.

ಇತರ ದೇಶಗಳ ಜೊತೆ ಬ್ರಿಟನ್ ಸಂಬಂಧಗಳನ್ನು, ಆಹಾರಕ್ರಮಗಳನ್ನು ಪ್ರಚುರಪಡಿಸುವ ಹೊಣೆ ಹೊತ್ತಿದ್ದ ಬ್ರಿಟಿಷ್ ಇಂಡಿಯಾ, ಉಪಖಂಡದ ಓದುಗರಿಗಾಗಿ ಇದನ್ನು ಪ್ರಕಟಿಸುವುದು ಅವಿವೇಕವಾಗುತ್ತದೆ ಎಂದು ಆರ್ವೆಲ್ ಅವರಿಗೆ ತಿಳಿಸಿತ್ತು.

ಭಾರತ ಹಾಗೂ ಬ್ರಿಟಿಷ್ ಆಹಾರಪದ್ಧತಿಗಳ ಕುರಿತು ಆರ್ವೆಲ್ ಅವರು ಉಲ್ಲೇಖಿಸಿದ್ದ ಒಂದೆರಡು ಟೀಕೆಗಳ ಕಾರಣವಾಗಿ ಪ್ರಕಟಣೆಯನ್ನು ತಡೆಹಿಡಿಯಲಾಗಿತ್ತು. ಕ್ಷಮಾಪಣೆ ಪತ್ರದ ಜೊತೆ ಪ್ರಬಂಧವನ್ನುಮೂಲ ರೂಪದಲ್ಲಿಯೇ ಪ್ರಕಟಿಸಲು ಬ್ರಿಟಿಷ್ ಕೌನ್ಸಿಲ್ ಈಗ ಮುಂದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.