ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಲ್ವಾಮ ದಾಳಿ ಬಗ್ಗೆ ದಾಖಲೆ ನೀಡಿ, ನಾವು ಕ್ರಮ ಕೈಗೊಳ್ಳುತ್ತೇವೆ: ಇಮ್ರಾನ್ ಖಾನ್

Last Updated 25 ಫೆಬ್ರುವರಿ 2019, 5:57 IST
ಅಕ್ಷರ ಗಾತ್ರ

ಇಸ್ಲಾಮಬಾದ್: ಭಾರತ- ಪಾಕಿಸ್ತಾನ ಗಡಿಭಾಗದಲ್ಲಿ ಶಾಂತಿ ಕಾಪಾಡಲು ಅವಕಾಶ ಕೊಡಿ. ನಾವು ನನ್ನ ಮಾತಿಗೆ ಬದ್ಧ, ಪುಲ್ವಾಮ ದಾಳಿ ಬಗ್ಗೆ ದಾಖಲೆ ನೀಡಿದರೆ ನಾವು ಸರಿಯಾದ ಕ್ರಮ ಕೈಗೊಳ್ಳುತ್ತೇವೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ಪ್ರಧಾನಿ ಇಮ್ರಾನ್ ಖಾನ್ ಅವರ ಮಾತಿಗೆ ಬದ್ಧರಾಗಿದ್ದಾರೆ. ಪುಲ್ವಾಮ ದಾಳಿ ಬಗ್ಗೆ ಭಾರತ ತನಿಖಾ ವರದಿಗಳನ್ನು ನೀಡಿದರೆ ನಾವು ತಕ್ಷಣವೇ ಕ್ರಮ ಕೈಗೊಳ್ಳುತ್ತೇವೆ ಎಂದು ಪಾಕಿಸ್ತಾನದ ಪ್ರಧಾನಿ ಕಚೇರಿಪ್ರಕಟಣೆಯಲ್ಲಿ ಹೇಳಿದೆ.

ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಜೈಷ್- ಎ- ಮೊಹಮ್ಮದ್ ಫೆ. 14ರಂದು ಪುಲ್ವಾಮದಲ್ಲಿ ಆತ್ಮಾಹುತಿ ದಾಳಿ ನಡೆಸಿದ ನಂತರ ಉಭಯ ರಾಷ್ಟ್ರಗಳ ಸಂಬಂಧ ಹದಗೆಟ್ಟಿದೆ.

ಭಾರತ ಪಾಕಿಸ್ತಾನದೊಂದಿಗೆ ದಾಳಿ ಬಗ್ಗೆ ತನಿಖಾ ಮಾಹಿತಿಗಳನ್ನು ಹಂಚಿಕೊಂಡರೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಫೆ. 19ರಂದು ಇಮ್ರಾನ್ ಖಾನ್ ಭರವಸೆ ನೀಡಿದ್ದರು. ಆದರೆ ಭಾರತ ಪ್ರತಿ ದಾಳಿ ನಡೆಸಿದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆಯನ್ನೂ ನೀಡಿದ್ದರು.
ಆದಾಗ್ಯೂ , ದಾಳಿ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಇಮ್ರಾನ್ ಹೇಳಿರುವುದು ಸುಳ್ಳು ನೆಪ.ಜೈಷ್- ಎ- ಮೊಹಮ್ಮದ್ ಸಂಘಟನೆ ಮತ್ತು ಅದರ ಮುಖಂಡ ಮಸೂದ್ ಅಜರ್ ಪಾಕಿಸ್ತಾನದವ ಎಂಬುದು ಗೊತ್ತಿರುವ ಸಂಗತಿ. ಹೀಗಿರುವಾಗ ಕ್ರಮ ತೆಗೆದುಕೊಳ್ಳಲು ಪಾಕಿಸ್ತಾನದ ಬಗೆ ಸಾಕಷ್ಟು ದಾಖಲೆಗಳು ಇವೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT