ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಸುನಕ್‌ ನಿವಾಸಕ್ಕೆ ಕಪ್ಪು ಬಟ್ಟೆ ಸುತ್ತಿ ಪ್ರತಿಭಟಿಸಿದ ಪರಿಸರವಾದಿಗಳು

Published 3 ಆಗಸ್ಟ್ 2023, 11:04 IST
Last Updated 3 ಆಗಸ್ಟ್ 2023, 11:04 IST
ಅಕ್ಷರ ಗಾತ್ರ

ಲಂಡನ್‌: ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರು ಒಪ್ಪಿಗೆ ನೀಡಿದ್ದ ‘ಪಳಯುಳಿಕೆ ಇಂಧನ ನೀತಿ’ ವಿರೋಧಿಸಿ ಗ್ರೀನ್‌ಪೀಸ್‌ ಯುಕೆ ಸಂಘದ ಕಾರ್ಯಕರ್ತರು ಸುನಕ್ ಅವರ ನಿವಾಸಕ್ಕೆ ಕಪ್ಪು ಬಟ್ಟೆ ಸುತ್ತಿ ಪ್ರತಿಭಟನೆ ನಡೆಸಿದರು.

ಈ ವಾರ ಸುನಕ್‌ ಅವರು ಉತ್ತರ ಸಮುದ್ರದಲ್ಲಿ ನೂರಾರು ತೈಲ ಮತ್ತು ಗ್ಯಾಸ್‌ ಪರವಾನಗೆಗಳಿಗೆ ಒಪ್ಪಿಗೆ ನೀಡಿದ್ದರು. ಇದು ಪರಿಸರವಾದಿಗಳನ್ನು ಕೆರಳಿಸಿತ್ತು. 

‘ನಮ್ಮ ಪ್ರಧಾನಿಯಾದವರು ಪರಿಸರವನ್ನು ಕಾಯುವ ನಾಯಕರಾಗಬೇಕೇ ಹೊರತು, ಪರಿಸರಕ್ಕೆ ಬೆಂಕಿ ಹಚ್ಚುವವರಾಗಬಾರದು’ ಎಂದು ಗ್ರೀನ್‌ಪೀಸ್‌ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.

ಕಾಡ್ಗಿಚ್ಚುಗಳು ಮತ್ತು ಪ್ರವಾಹಗಳು ಜಗತ್ತಿನಾದ್ಯಂತ ಮನೆ ಮತ್ತು ಜೀವನವನ್ನು ಹಾಳುಮಾಡುವಂತೆ, ಸುನಕ್ ಅವರು ತೈಲ ಮತ್ತು ಅನಿಲ ಕೊರೆಯುವಿಕೆಯ ಬೃಹತ್ ವಿಸ್ತರಣೆಗೆ ವಿಸ್ತರಣೆಗೆ ಒತ್ತು ನೀಡುತ್ತಿದ್ದಾರೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಘಟನೆಯ ಕಾರ್ಯಕರ್ತರು ಸುನಕ್‌ ಅವರ ನಿವಾಸಕ್ಕೆ ಕಪ್ಪು ಬಟ್ಟೆ ಹೊದಿಸುತ್ತಿರುವ ಹಾಗೂ ‘ತೈಲ ಲಾಭವೇ ಅಥವಾ ನಮ್ಮ ಭವಿಷ್ಯವೇ’ ಎಂದು ಬರೆದಿರುವ ಪೋಸ್ಟರ್‌ ಅನ್ನು ಹಿಡಿದಿರುವ ಫೋಟೊಗಳನ್ನು 'ಗ್ರೀನ್‌ಪೀಸ್‌' ಹಂಚಿಕೊಂಡಿದೆ.

ಸದ್ಯ ರಿಷಿ ಸುನಕ್‌ ಹಾಗೂ ಅವರ ಕುಟುಂಬ ಕ್ಯಾಲಿಪೋರ್ನಿಯಾದಲ್ಲಿ  ಪ್ರವಾಸದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT