ಪ್ಯಾರಿಸ್: ಈ ಬಾರಿ ಬೇಸಿಗೆಯಲ್ಲಿನ ಬಿಸಿಲಿಗೆ ಯುರೋಪ್ ಬಸವಳಿದಿದೆ. ಪ್ಯಾರಿಸ್, ಲಂಡನ್ ಸೇರಿದಂತೆ ಯುರೋಪ್‌ನ ಪ್ರಮುಖ ನಗರ, ಪಟ್ಟಣಗಳಲ್ಲಿ ಬೀಸುತ್ತಿರುವ ಬಿಸಿಗಾಳಿಯಿಂದಾಗಿ ಜನರು ಹೈರಾಣಾಗಿದ್ದಾರೆ.

ಪ್ಯಾರಿಸ್‌ನಲ್ಲಿ ಗುರುವಾರ 41 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. 1947ರಲ್ಲಿ 40.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಈಗ ಈ ದಾಖಲೆಯನ್ನೂ ಹಿಂದಿಕ್ಕಿದಂತಾಗಿದೆ.

ಹವಾಮಾನದಲ್ಲಿನ ವ್ಯತ್ಯಾಸದಿಂದಾಗಿ ತಾಪಮಾನದಲ್ಲಿನ ಈ ಹೆಚ್ಚಳ, ಯುರೋಪ್‌ನ ಬಹುತೇಕ ಭಾಗಗಳಲ್ಲಿ ಸಾಮಾನ್ಯ ಎಂಬಂತೆ ಮುಂದುವರಿಯಬಹುದು ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.

ಲಂಡನ್‌ನಲ್ಲಿ 39 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಉತ್ತರ ಆಫ್ರಿಕಾದಿಂದ ಬೀಸುತ್ತಿರುವ ಬಿಸಿಗಾಳಿಯೇ ಈ ವಿದ್ಯಮಾನಕ್ಕೆ ಕಾರಣ. ಬಿಸಿಗಾಳಿ ಪರಿಣಾಮ ಈ ದೇಶಗಳಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಜನರು ಮನೆಯಲ್ಲಿಯೇ ಇರುವಂತೆ ಫ್ರಾನ್ಸ್ ಸರ್ಕಾರ ಸಲಹೆ ನೀಡಿದೆ. ಮುಂದಿನ ದಿನಗಳಲ್ಲಿ ಜರ್ಮನಿ, ಬೆಲ್ಜಿಯಂ, ನೆದರ್ಲೆಂಡ್ಸ್ ಹಾಗೂ ಸ್ವಿಟ್ಜರ್ಲೆಂಡ್ ನಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಬಹುದು ಎಂದೂ ಅಂದಾಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.