ಟೋಕಿಯೊ: ನೈರುತ್ಯ ಜಪಾನ್‌ನಲ್ಲಿ ಶನಿವಾರ ಸುರಿದ ಧಾರಾಕಾರ ಮಳೆ ಹಾಗೂ ಪ್ರವಾಹದಿಂದಾಗಿ ನೂರಾರು ಮನೆಗಳು ಕೊಚ್ಚಿ ಹೋಗಿವೆ, ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಭಾರಿ ಮಳೆಯಿಂದಾಗಿ ಶುಕ್ರವಾರ ಸಂಭವಿಸಿದ ಭೂ ಕುಸಿತದಲ್ಲಿ ಒಬ್ಬ ವ್ಯಕ್ತಿ ಸತ್ತಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ. ಟೋಕಿಯೊ ನಗರದ ದಕ್ಷಿಣ ಭಾಗದಲ್ಲಿರುವ ಕುರುಮೆಯಲ್ಲಿ ನದಿಗಳು ಉಕ್ಕಿ ಹರಿಯುತ್ತಿವೆ. ನದಿ ಪಾತ್ರದಲ್ಲಿದ್ದ ಜನರನ್ನು ಬೋಟ್‌ಗಳ ಸಹಾಯದಿಂದ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಕೆಸರು ನೀರಿನಲ್ಲಿ ಸಿಲುಕಿದ್ದವರನ್ನು ಪರಿಹಾರ ಕಾರ್ಯಪಡೆಯವರು ರಕ್ಷಿಸಿದ್ದಾರೆ.

ದಕ್ಷಿಣ ಜಪಾನ್‌ನಲ್ಲಿ ಈ ವಾರ ಭಾರಿ ಮಳೆಯಾಗಿದೆ. ಜಪಾನ್ ಹವಾಮಾನ ಸಂಸ್ಥೆ ಪ್ರಕಾರ, ದ್ವೀಪ ಸಮೂಹದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಹಿರೋಶಿಮಾ ಸೇರಿದಂತೆ, ಕ್ಯೂಶು ವಲಯ ಹಾಗೂ ಜಪಾನ್‌ನ ಇತರ ಭಾಗಗಳಲ್ಲಿ ಮಳೆಯಾಗುವ ಹಾಗೂ ಭೂ ಕುಸಿತ ಸಂಭವಿಸುವ ಸಾಧ್ಯತೆ ಕುರಿತು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮಧ್ಯ ಜಪಾನ್‌ನ ಹಿಂದಿನ ರಾಜಧಾನಿ ಕ್ಯೂಟೊ ಮತ್ತು ನಾಗಾವೊದಲ್ಲಿ ಭಾರಿ ಮಳೆಯಾಗುತ್ತಿದ್ದು, ಈಗ ಮಾರುತಗಳು ನಿಧಾನವಾಗಿ ಪೂರ್ವಕ್ಕೆ ಚಲಿಸುತ್ತಿವೆ‘ ಎಂದು ಇಲಾಖೆ ತಿಳಿಸಿದೆ.

ಪಾಕ್ ಸ್ವಾತಂತ್ರ್ಯ ದಿನಾಚರಣೆಗೆ ವಿಷ್ ಮಾಡಿ ಟ್ರೋಲ್ಗೆ ಗುರಿಯಾದ ಕಮ್ರಾನ್ ಅಕ್ಮಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.