ಕಾಲಿವಿಲ್ಲೆ, ಅಮೆರಿಕ: ಟೆಕ್ಸಾಸ್‌ನ ಯಹೂದಿ ಮಂದಿರದಲ್ಲಿ ನಡೆದ ಒತ್ತೆಯಾಳು ಪ್ರಕರಣವು ಭಾನುವಾರ ಸುಖಾಂತ್ಯ ಕಂಡಿದ್ದು, ಒತ್ತೆಯಾಳುಗಳಾಗಿದ್ದ ನಾಲ್ವರು ಸುರಕ್ಷಿತವಾಗಿದ್ದಾರೆ ಹಾಗೂ ಒತ್ತೆ ಇಟ್ಟಿದ್ದ ದುಷ್ಕರ್ಮಿಯನ್ನು ಹತ್ಯೆ ಮಾಡಲಾಗಿದೆ.
ಅಫ್ಗಾನಿಸ್ತಾನದಲ್ಲಿ ಅಮೆರಿಕ ಸೇನಾಧಿಕಾರಿಗಳನ್ನು ಕೊಲ್ಲಲು ಯತ್ನಿಸಿದ ಪಾಕಿಸ್ತಾನದ ನರವಿಜ್ಞಾನಿಯನ್ನು ಬಿಡುಗಡೆ ಮಾಡುವಂತೆ ಬೇಡಿಕೆ ಇಟ್ಟಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒತ್ತೆ ಘಟನೆಗೆ ಸಂಬಂಧಿಸಿದಂತೆ ಡಲ್ಲಾಸ್ ವಾಹಿನಿ ಡಬ್ಲ್ಯುಎಫ್‌ಎಎ ವಿಡಿಯೊ ಬಿಡುಗಡೆ ಮಾಡಿದೆ. ದುಷ್ಕರ್ಮಿ ಬಿಡುಗಡೆಗೆ ಒತ್ತಾಯಿಸಿರುವ ಪಾಕಿಸ್ತಾನದ ಈ ಮಹಿಳಾ ವಿಜ್ಞಾನಿ ಸದ್ಯ ಅಮೆರಿಕದಲ್ಲೇ ಬಂಧನದಲ್ಲಿದ್ದಾಳೆ.