ವಾಷಿಂಗ್ಟನ್: ‘ಭಾರತದೊಂದಿಗೆ ನ್ಯಾಯಯುತ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ದಿನಗಳು ಹತ್ತಿರವಾಗಿವೆ. ಜತೆಗೆ, ಭಾರತದ ಉತ್ಪನ್ನಗಳ ಮೇಲೆ ವಿಧಿಸಿರುವ ಸುಂಕವನ್ನು ಸಹ ಮುಂದಿನ ದಿನಗಳಲ್ಲಿ ಕಡಿಮೆ ಮಾಡಲಾಗುವುದು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭರವಸೆ ನೀಡಿದ್ದಾರೆ.

ಭಾರತದೊಂದಿಗೆ ಪ್ರಸ್ತಾವಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ಭರವಸೆಯನ್ನು ಅಮೆರಿಕ ಅಧ್ಯಕ್ಷರು ಎರಡನೇ ಬಾರಿಗೆ ವ್ಯಕ್ತಪಡಿಸಿದ್ದಾರೆ.

ಓವಲ್ ಕಚೇರಿಯಲ್ಲಿ ಸೋಮವಾರ ನಡೆದ ಭಾರತದಲ್ಲಿನ ಅಮೆರಿಕ ರಾಯಭಾರಿಯಾಗಿ ನೇಮಕಗೊಂಡಿರುವ ಸೆರ್ಗಿಯೊ ಗೋರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ‘ನಾವು ಸಾಕಷ್ಟು ಅನ್ಯಾಯದ ವ್ಯಾಪಾರ ಒಪ್ಪಂದಗಳನ್ನು ಹೊಂದಿದ್ದೇವೆ. ಹೀಗಾಗಿ, ಭಾರತದೊಂದಿಗೆ ನ್ಯಾಯಯುತ ಒಪ್ಪಂದ ಮಾಡಿಕೊಳ್ಳುತ್ತೇವೆ. ಈ ಹಿಂದೆ ಹೊಂದಿದ್ದಕ್ಕಿಂತ ಹೆಚ್ಚು ವಿಭಿನ್ನವಾದ ಒಪ್ಪಂದ. ಸದ್ಯಕ್ಕೆ ಅವರು ನನ್ನನ್ನು ಪ್ರೀತಿಸುತ್ತಿಲ್ಲ. ಆದರೆ, ಮತ್ತೆ ಅವರು ನಮ್ಮನ್ನು ಪ್ರೀತಿಸುತ್ತಾರೆ’ ಎಂದು ಹೇಳಿದ್ದಾರೆ.

‘ರಷ್ಯಾದ ತೈಲ ಖರೀದಿ ಕಾರಣದಿಂದ ಭಾರತದ ವಸ್ತುಗಳ ಮೇಲೆ ವಿಧಿಸಿರುವ ಸುಂಕ ಹೆಚ್ಚಿದೆ. ಭಾರತ ರಷ್ಯಾದ ತೈಲ ಖರೀದಿಯನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಹೀಗಾಗಿ, ನಾವು ಸುಂಕಗಳನ್ನು ಕಡಿಮೆ ಮಾಡುತ್ತೇವೆ’ ಎಂದಿದ್ದಾರೆ.

‘ಭಾರತವು ವೇಗವಾಗಿ ಬೆಳೆಯುತ್ತಿರುವ ಮಧ್ಯಮ ವರ್ಗವನ್ನು ಹೊಂದಿದೆ. ಇಂಡೋ–ಪೆಸಿಫಿಕ್ ಪ್ರದೇಶದಲ್ಲಿ ಪ್ರಮುಖ ಆರ್ಥಿಕ ಮತ್ತು ಕಾರ್ಯತಂತ್ರದ ಭದ್ರತಾ ಪಾಲುದಾರ’ ಎಂದು ಹೇಳಿದ್ದಾರೆ.

‘ಭಾರತ ಅದ್ಭುತ ದೇಶ. ವಾಸ್ತವವಾಗಿ, 150 ಕೋಟಿ ಜನಸಂಖ್ಯೆಯನ್ನು ಹೊಂದಿದೆ. ಚೀನಾ 140 ಕೋಟಿ ಜನಸಂಖ್ಯೆ ಹೊಂದಿದೆ. ಅವೆರಡೂ ದೊಡ್ಡ ದೇಶಗಳು. ರಾಯಭಾರಿಯಾಗಿ ಸೆರ್ಗಿಯೊ ನಮ್ಮ ದೇಶದ ಸಂಬಂಧಗಳನ್ನು ಬಲಪಡಿಸಲು, ಅಮೆರಿಕದ ಪ್ರಮುಖ ಕೈಗಾರಿಕೆಗಳು ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೂಡಿಕೆಯನ್ನು ಉತ್ತೇಜಿಸಲು, ಇಂಧನ ರಫ್ತುಗಳನ್ನು ಹೆಚ್ಚಿಸಲು ಮತ್ತು ಭದ್ರತಾ ಸಹಕಾರವನ್ನು ವಿಸ್ತರಿಸುವ ಕಾರ್ಯಳನ್ನು ಕೈಗೊಳ್ಳುತ್ತಾರೆ’ ಎಂದು ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಮಾಜಿ ಅಧ್ಯಕ್ಷ ಜೋ ಬೈಡನ್ ಅವರಿಗೆ ಭಾರತದ ಬಗ್ಗೆ ಏನೂ ತಿಳಿದಿರಲಿಲ್ಲ’ ಎಂದು ಟೀಕಿಸಿದ್ದಾರೆ.

ಭಾರತ– ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧ ಬಹಳ ಮುಖ್ಯವಾದದ್ದು. ನವದೆಹಲಿಯಲ್ಲಿ ಸೆರ್ಗಿಯೊ ಗೋರ್ ಅವರು ಒಳ್ಳೆಯ ಯಶಸ್ಸು ಪಡೆಯಲಿದ್ದಾರೆ.
ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ
.ಅಮೆರಿಕ ಚುನಾವಣೆ ಅಕ್ರಮಕ್ಕೆ ಯತ್ನ: ಆರೋಪಿಗಳಿಗೆ ಟ್ರಂಪ್ ಕ್ಷಮಾಪಣೆ.ಎಚ್1–ಬಿ ವೀಸಾ ದುರುಪಯೋಗ: 175 ಪ್ರಕರಣಗಳ ತನಿಖೆಗೆ ಟ್ರಂಪ್ ಸರ್ಕಾರದ ಆದೇಶ.ಮುಂದಿನ ವರ್ಷ ಭಾರತಕ್ಕೆ ಭೇಟಿ : ಡೊನಾಲ್ಡ್ ಟ್ರಂಪ್.ಪಾಕಿಸ್ತಾನ, ಚೀನಾ ಅಣ್ವಸ್ತ್ರ ಪರೀಕ್ಷೆ ಮಾಡುತ್ತಿವೆ: ಡೊನಾಲ್ಡ್ ಟ್ರಂಪ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.