‘ಪಾಕಿಸ್ತಾನ ಸೇರಿ ಹಲವು ದೇಶಗಳು ತಮ್ಮ ಪರಮಾಣು ಯುದ್ಧ ಸಾಮರ್ಥ್ಯವನ್ನು ಪರೀಕ್ಷೆ ಮಾಡುತ್ತಿವೆ, ಆದರೆ ಹೇಳಿಕೊಳ್ಳುತ್ತಿಲ್ಲ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

‘ಸಿಬಿಎಸ್ ನ್ಯೂಸ್’ ಸಂಸ್ಥೆಯ ‘60 ಮಿನಿಟ್ಸ್’ ಕಾರ್ಯಮಕ್ರಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.
.ಟ್ರಂಪ್ ಬಗ್ಗೆ ಮೋದಿಗೆ ಭಯ; ದೊಡ್ಡ ಉದ್ಯಮಿಗಳ 'ರಿಮೋಟ್ ಕಂಟ್ರೋಲ್': ರಾಹುಲ್.
ಅಮೆರಿಕವೂ ತನ್ನ ಪರಮಾಣು ಸಾಮರ್ಥ್ಯವನ್ನು ಪರೀಕ್ಷೆ ಮಾಡಲಿದೆ ಎನ್ನುವ ಊಹಾಪೋಹಗಳು ಕೇಳಿ ಬರುತ್ತಿರುವಾಗಲೇ ಟ್ರಂಪ್ ಅವರಿಂದ ಈ ಮಾತು ಬಂದಿದೆ.

ರಾಷ್ಟ್ರಗಳು ಈ ಬಗ್ಗೆ ಮಾತನಾಡುವುದಿಲ್ಲ. ಭೂಗರ್ಭದಲ್ಲಿ ಅವರು ಪರೀಕ್ಷೇ ಮಾಡುತ್ತಾರೆ. ಜನರಿಗೆ ಏನಾಗುತ್ತಿದೆ ಎಂದು ತಿಳಿಯುವುದಿಲ್ಲ. ಸಣ್ಣ ಭೂಕಂಪನ ಆದ ಅನುಭವ ಅವರಿಗಾಗುತ್ತದೆ’ ಎಂದು ಟ್ರಂಪ್ ಹೇಳಿದ್ದಾರೆ.
.ಯುದ್ಧ ನಿಲ್ಲಿಸಿದೆ ಎಂಬ ಟ್ರಂಪ್ ಹೇಳಿಕೆ ವಿರೋಧಿಸುವ ಧೈರ್ಯ ಮೋದಿಗಿಲ್ಲ: ರಾಹುಲ್.
‘ರಷ್ಯಾ ಹಾಗೂ ಚೀನಾವೂ ಅಣ್ವಸ್ತ್ರ ಪರೀಕ್ಷೆ ಮಾಡುತ್ತಿದೆ. ಆದರೆ ಅವರು ಅದರ ಬಗ್ಗೆ ಮಾತನಾಡುತ್ತಿಲ್ಲ. ನಾವು ಬಹಿರಂಗವಾಗಿ ಹೇಳಿಕೊಳ್ಳುತ್ತೇವೆ. ನಾವು ಅವರಿಗಿಂತ ಭಿನ್ನ. ನಾವು ಅದರ ಬಗ್ಗೆ ಮಾತನಾಡುತ್ತೇವೆ. ನಾವು ಅದರ ಬಗ್ಗೆ ಮಾತನಾಡಲೇಬೇಕು, ಇಲ್ಲದಿದ್ದರೆ ನೀವು ವರದಿ ಮಾಡುತ್ತೀರಿ. ಆದರೆ ಅವರ ಬಳಿ ಆ ಬಗ್ಗೆ ಬರೆಯುವ ವರದಿಗಾರರೇ ಇಲ್ಲ’ ಎಂದು ಟ್ರಂಪ್ ಹೇಳಿದ್ದಾರೆ.

‘ಬೇರೆಯವರೂ ಪರೀಕ್ಷೆ ಮಾಡುತ್ತಿದ್ದಾರೆ, ಹೀಗಾಗಿ ನಾವೂ ಮಾಡುತ್ತಿದ್ದೇವೆ. ಉತ್ತರ ಕೊರಿಯಾ ಹಾಗೂ ಪಾಕಿಸ್ತಾನವೂ ಪರೀಕ್ಷೆ ಮಾಡುತ್ತಿದೆ’ ಎಂದು ಹೇಳಿದ್ದಾರೆ.
.ದಕ್ಷಿಣ ಕೊರಿಯಾಕ್ಕೆ ಟ್ರಂಪ್ ಭೇಟಿ; ಕ್ಷಿಪಣಿ ಹಾರಿಸಿದ ಉತ್ತರ ಕೊರಿಯಾ.
‘ಬೇರೆ ಅಣ್ವಸ್ತ್ರ ರಾಷ್ಟ್ರಗಳಿಗೆ ಸಮಾನವಾಗಿ ಪರೀಕ್ಷೆ ನಡೆಸಿ’ ಎಂದು ಡೊನಾಲ್ಡ್ ಟ್ರಂಪ್ ಈ ಹಿಂದೆ ರಕ್ಷಣಾ ಇಲಾಖೆಗೆ ಸೂಚನೆ ನೀಡಿದ್ದರು.
.ಅಮೆರಿಕದ ಟ್ರಂಪ್, ಚೀನಾದ ಜಿನ್ಪಿಂಗ್ ಭೇಟಿ: ಸುಂಕದ ಕುರಿತಾಗಿ ಮಾತುಕತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.