ಇಸ್ಲಾಮಾಬಾದ್: ಸಂಭಾವ್ಯ ಪ್ರವಾಹದ ಬಗ್ಗೆ ಪಾಕಿಸ್ತಾನಕ್ಕೆ ಭಾರತ ಎಚ್ಚರಿಕೆ ನೀಡಿದೆ ಎಂದು ದೇಶದ ವಿದೇಶಾಂಗ ಕಚೇರಿ ಸೋಮವಾರ ತಿಳಿಸಿದೆ. ಆದರೆ, ಈ ಎಚ್ಚರಿಕೆಯನ್ನು ಸಿಂಧೂ ಜಲ ಆಯೋಗದ ಬದಲು ರಾಜತಾಂತ್ರಿಕ ಮಾರ್ಗಗಳ ಮೂಲಕ ತಿಳಿಸಲಾಗಿದೆ ಎಂದು ಅದು ಒತ್ತಿಹೇಳಿದೆ.

ಸಿಂಧೂ ಜಲ ಒಪ್ಪಂದದ ಎಲ್ಲಾ ನಿಬಂಧನೆಗಳನ್ನು ಸಂಪೂರ್ಣವಾಗಿ ಪಾಲಿಸಲು ಭಾರತ ಬದ್ಧವಾಗಿದೆ ಎಂದು ವಿದೇಶಾಂಗ ಕಚೇರಿಯ ವಕ್ತಾರ ಶಹಫ್ಖತ್ ಅಲಿ ಖಾನ್ ಪುನರುಚ್ಚರಿಸಿದ್ದಾರೆ.

ತವಿ ನದಿಯಲ್ಲಿನ ಪ್ರವಾಹದ ಬಗ್ಗೆ ಮಾನವೀಯ ನೆಲೆಯಲ್ಲಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಲಾಗಿದೆ ಎಂದು ಭಾರತದ ಮೂಲಗಳು ತಿಳಿಸಿವೆ. ಮೇ ತಿಂಗಳಲ್ಲಿ ಉಭಯ ದೇಶಗಳ ನಡುವೆ ನಡೆದ ನಾಲ್ಕು ದಿನಗಳ ಸಂಘರ್ಷದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಮೊದಲ ಅಧಿಕೃತ ಸಂಪರ್ಕ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.