ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ಎಸ್‌ಇಸಿ ತೊರೆಯಲಿರುವ ಪ್ರಧಾನ ಆರ್ಥಿಕ ತಜ್ಞ ಎಸ್‌ಪಿ ಕೊಠಾರಿ

Last Updated 23 ಡಿಸೆಂಬರ್ 2020, 6:04 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಸೆಕ್ಯುರಿಟಿಸ್‌ ಅಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ವಿಭಾಗದ ಪ್ರಾಮುಖ್ಯ ವೃದ್ಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಪ್ರಧಾನ ಆರ್ಥಿಕ ತಜ್ಞ ಮತ್ತು ಡಿವಿಷನ್‌ ಆಫ್ ಎಕನಾಮಿಕ್ ಅಂಡ್ ರಿಸ್ಕ್ ಅನಾಲಿಸಿಸ್‌ (ಡೇರಾ) ನಿರ್ದೇಶಕ ಭಾರತೀಯ ಅಮೆರಿಕನ್‌ ಎಸ್‌.ಪಿ ಕೊಠಾರಿ ಅವರು, ಜನವರಿ ಅಂತ್ಯದೊಳಗೆ ಎಸ್‌ಇಸಿಯನ್ನು ತೊರೆಯಲಿದ್ದಾರೆ.

‘ಒಬ್ಬ ಪ್ರಮುಖ ಆರ್ಥಿಕ ತಜ್ಞರಾಗಿ ಕೊಠಾರಿಯವರು, ಎಸ್‌ಇಸಿಯ ಪರಿಚಯವನ್ನು ದೇಶ ವಿದೇಶಗಳಿಗೆ ಪರಿಚಯಿಸಿದರು. ಹೂಡಿಕೆದಾರರು ಮತ್ತು ನಮ್ಮ ಮಾರುಕಟ್ಟೆಗಳ ಮೇಲೆ ಆರ್ಥಿಕ ಪರಿಣಾಮದ ಕುರಿತು ಸಾಕಷ್ಟು ಕೆಲಸ ಮಾಡಿದ್ದಾರೆ‘ ಎಂದು ಎಸ್‌ಇಸಿ ಅಧ್ಯಕ್ಷ ಜಾಯ್ ಕ್ಲೇಟನ್ ಶ್ಲಾಘಿಸಿದ್ದಾರೆ.

‘ಅತ್ಯಾಧುನಿಕ ಸ್ಥೂಲ ಆರ್ಥಿಕ ವಿಶ್ಲೇಷಣೆ ಮತ್ತು ಮಾರುಕಟ್ಟೆ ವಾಸ್ತವಿಕವಾದದ ಅಪರೂಪದ ಸಂಯೋಜನೆ ಮತ್ತು ಸಂಕೀರ್ಣ ಆರ್ಥಿಕ ಮತ್ತು ಮಾರುಕಟ್ಟೆ ವ್ಯಾಖ್ಯಾನವನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಮೂಲಕ ಕೊಠಾರಿಯವರು ಸಾಧನೆ ಮಾಡಿದ್ದಾರೆ‘ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT