ವಾಷಿಂಗ್ಟನ್: ಅನಾರೋಗ್ಯದಿಂದ ಬಳಲುತ್ತಿದ್ದ ಸಂಬಂಧಿಯ ಬಳಿ ವಿಡಿಯೊ ಕಾಲ್ನಲ್ಲಿ ಹಿಂದಿಯಲ್ಲಿ ಮಾತನಾಡಿದ್ದಕ್ಕೆ ಅಪಾರ್ಥಗೊಂಡು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಭಾರತ ಮೂಲದ ಅಮೆರಿಕ ಉದ್ಯೋಗಿಯೊಬ್ಬರು ದೂರಿದ್ದಾರೆ.

ಅನಿಲ್ ವರ್ಷನೈ (78) ಎನ್ನುವವರು ‘ಹಂಟ್ಸ್ವಿಲ್ಲೆ ಡಿಫೆನ್ಸ್ ಕಾಂಟ್ರಾಕ್ಟರ್ ಪರಸನ್ಸ್ ಕಾರ್ಪೋರೇಷನ್’(Huntsville missile defence contractor Parsons Corporation) ಎನ್ನುವ ಕಂಪನಿಯಲ್ಲಿ ಹಿರಿಯ ಸಿಸ್ಟಮ್ ಎಂಜಿಯರ್ ಆಗಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರು.

ಭಾರತದಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಸೋದರ ಮಾವನೊಂದಿಗೆ ವಿಡಿಯೊ ಕಾಲ್ನಲ್ಲಿ ಹಿಂದಿಯಲ್ಲಿ ಮಾತನಾಡಿದ್ದಕ್ಕೆ, ಕಂಪನಿಯ ಗೌಪ್ಯ ಮಾಹಿತಿಗಳನ್ನು ಹಂಚಿಕೊಂಡು, ಸಂಸ್ಥೆಯ ಸುರಕ್ಷತೆಗೆ ಧಕ್ಕೆಯುಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿ ಕೆಲಸದಿಂದ ತೆಗೆದಿದ್ದಾರೆ ಎಂದಿದ್ದಾರೆ.

ಈ ಬಗ್ಗೆ ಅನಿಲ್, ಕೆಲಸದ ವಿಚಾರದಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ಫೆಡರಲ್ ಮೊಕದ್ದಮೆಯನ್ನು ಸಲ್ಲಿಸಿದ್ದಾರೆ. ಅಲ್ಲದೆ ಕಳೆದ ಅಕ್ಟೋಬರ್ನಿಂದ ಉದ್ಯೋಗವಿಲ್ಲದೆ ಬದುಕುತ್ತಿದ್ದೇನೆ ಎಂದು ಅಳಲು ತೋಡಿಕೊಂಡಿದ್ದಾರೆ.

‘ವಿಡಿಯೊ ಕಾಲ್ನಲ್ಲಿ ಮಾತನಾಡುತ್ತಿದ್ದ ವೇಳೆ ಸಹೋದ್ಯೋಗಿಯೊಬ್ಬರು ಬಂದು ವಿಡಿಯೊ ಕಾಲ್ ನಲ್ಲಿರುವುದನ್ನು ಖಚಿತಪಡಿಸಿಕೊಂಡಿದ್ದರು, ನಂತರ ಇನ್ನೊಬ್ಬರು ಬಂದು ವಿಡಿಯೊ ಕರೆಗಳನ್ನು ಮಾಡುವಂತಿಲ್ಲ ಎಂದಿದ್ದಕ್ಕೆ ನಾನು ತಕ್ಷಣ ಕಾಲ್ ಕಟ್ ಮಾಡಿ ಹೋಗಿದ್ದೆ. ಆದರೆ ನಾನು ಮಾತನಾಡಿರುವ ಭಾಷೆ ಅರ್ಥವಾಗದೆ ಸಂಸ್ಥೆಯ ಗೌಪ್ಯ ಮಾಹಿತಿಯನ್ನು ಬಹಿರಂಗಪಡಿಸುತ್ತಿದ್ದಾರೆ ಎಂದು ಆರೋಪಿಸಿ ಕೆಲಸದಿಂದ ತೆಗೆಯಲಾಗಿದೆ’ ಎಂದು ಅನಿಲ್ ಹೇಳಿದ್ದಾರೆ ಎಂಬುದಾಗಿ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.