ವಾಷಿಂಗ್ಟನ್: ಬಹುರಾಷ್ಟ್ರೀಯ ಕೊರಿಯರ್ ದೈತ್ಯ ಕಂಪನಿ ಫೆಡೆಕ್ಸ್‌ನ ಹೊಸ ಕಾರ್ಯನಿರ್ವಹಣಾ ಅಧಿಕಾರಿಯಾಗಿ (ಸಿಇಒ) ಭಾರತ ಮೂಲದ ಅಮೆರಿಕನ್ ರಾಜ್ ಸುಬ್ರಮಣಿಯಂ ಶೀಘ್ರವೇ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಸಂಸ್ಥೆ ಘೋಷಿಸಿದೆ.

ಈಗ ಕಂಪನಿಯ ಸಿಇಒ ಮತ್ತು ಅಧ್ಯಕ್ಷರಾಗಿರುವ ಫ್ರೆಡೆರಿಕ್ ಡಬ್ಲ್ಯೂ ಸ್ಮಿತ್ ಅವರ ಅಧಿಕಾರಾವಧಿ ಜೂನ್ 1ರಂದು ಮುಕ್ತಾಯಗೊಳ್ಳಲಿದೆ. ಅಲ್ಲಿಯವರೆಗೆಸುಬ್ರಮಣಿಯಂ ಕಾರ್ಯಾಧ್ಯಕ್ಷರಾಗಿರಲಿದ್ದಾರೆ.

ರಾಜ್ ಸುಬ್ರಮಣಿಯಂ ಅವರ ನಾಯಕತ್ವ ಗುಣ ಕಂಪನಿಯನ್ನು ಭವಿಷ್ಯದಲ್ಲಿ ಯಶಸ್ವಿಯತ್ತ ಕೊಂಡೊಯ್ಯಲಿದೆ ಎಂಬ ನಂಬಿಕೆ ಇದೆ ಎಂದು ಫ್ರೆಡರಿಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಫ್ರೆಡರಿಕ್ ಸ್ಮಿತ್ ಅವರು 1971ರಲ್ಲಿ ಫೆಡೆಕ್ಸ್ ಕಂಪನಿ ಸ್ಥಾಪಿಸಿದರು. ಟೆನ್ನೆಸ್ಸಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಫೆಡೆಕ್ಸ್ ಜಾಗತಿಕವಾಗಿ ಆರು ಲಕ್ಷ ನೌಕರರನ್ನು ಹೊಂದಿದೆ.

ಸುಬ್ರಮಣಿಯಂ ಅವರು 2020ರಲ್ಲಿ ಫೆಡೆಕ್ಸ್ ಮಂಡಳಿ ನಿರ್ದೇಶಕರಾಗಿ ಚುನಾಯಿತರಾಗಿದ್ದರು. ವ್ಯವಹಾರ ಕಾರ್ಯತಂತ್ರದಲ್ಲಿ ಜಾಗತಿಕವಾಗಿ 30 ವರ್ಷಗಳ ಅನುಭವ ಹೊಂದಿದ್ದಾರೆ.

ನಮ್ಮ ಸಿನಿಮಾ ಯಾಕೆ ದಕ್ಷಿಣದಲ್ಲಿ ಓಡುವುದಿಲ್ಲ: ಸಲ್ಮಾನ್ ಖಾನ್ ಪ್ರಶ್ನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.