ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತರಗೋಳದಿಂದ ಸ್ಕೈಡೈವಿಂಗ್‌: ಭಾರತೀಯ ಮೂಲದ ಸ್ವಾತಿ ಭಾಗಿ

Published 31 ಆಗಸ್ಟ್ 2023, 15:36 IST
Last Updated 31 ಆಗಸ್ಟ್ 2023, 15:36 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ (ಪಿಟಿಐ): ವಾಯುಮಂಡಲದ ಸ್ತರಗೋಳದಿಂದ (ಭೂಮಿಯಿಂದ 50 ಕಿ.ಮೀ. ಎತ್ತರದಲ್ಲಿ ವ್ಯಾಪಿಸಿರುವ ವಾಯುಮಂಡಲದ ಎರಡನೇ ಪದರ) ಸ್ಕೈ ಡೈವಿಂಗ್‌ ಮಾಡಿ ಹೊಸ ವಿಶ್ವದಾಖಲೆ ನಿರ್ಮಿಸಲು ಆಯ್ಕೆಯಾಗಿರುವ ಮೂವರು ಮಹಿಳೆಯರಲ್ಲಿ ಭಾರತೀಯ ಮೂಲದ ಅಮೆರಿಕ ವಿಜ್ಞಾನಿ ಸ್ವಾತಿ ವಾರ್ಷಣೆ ಸಹ ಇದ್ದಾರೆ.

ಇಲಿಯಾನಾ ರೆಡ್ರಿಕ್ವಿಜ್‌ ಮತ್ತು ದಿಯಾನಾ ವಾಲೆರಿನ್‌ ಜಿಮೆನೆಝ್‌ ಐತಿಹಾಸಿಕ ಸ್ಕೈಡೈವಿಂಗ್‌ಗೆ ಸಜ್ಜಾಗಿರುವ ಇನ್ನಿಬ್ಬರು ಮಹಿಳೆಯರು.

ರೈಸಿಂಗ್‌ ಯುನೈಟೆಡ್ ಎಂಬ ಲಾಭರಹಿತ ಸಂಸ್ಥೆಯು  ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌, ಕಲೆ ಮತ್ತು  ಗಣಿತ ಕ್ಷೇತ್ರಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ‘ಹೆರಾ ರೈಸಿಂಗ್ ಇನಿಷಿಯೇಟಿವ್‌’ ಅಭಿಯಾನ ಆರಂಭಿಸಿ ಮೂವರು ಮಹಿಳೆಯರನ್ನು ಅನ್ವೇಷಣೆಗೆ ಕಳುಹಿಸಲು ಆಯ್ಕೆ ಮಾಡಿದೆ.

ಮೂವರು ಮಹಿಳೆಯರು 18 ತಿಂಗಳ ಕಾಲ ಕಠಿಣ ತರಬೇತಿ ಪಡೆಯಲಿದ್ದಾರೆ. ಮೂವರ ಪೈಕಿ ಒಬ್ಬರು ಮಾತ್ರ ಸ್ತರಗೋಳದಿಂದ ಜಿಗಿಯುತ್ತಾರೆ. ಉಳಿದ ಇಬ್ಬರು ತಂಡದಲ್ಲಿರುತ್ತಾರೆ ಎಂದು ಸ್ಪೇಸ್‌ ಡಾಟ್‌ ಕಾಮ್‌ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT