ವಾಷಿಂಗ್ಟನ್: ಭಾರತ ಸಂಜಾತ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮೂರನೇ ಬಾರಿಗೆ ಮಂಗಳವಾರ ಬಾಹ್ಯಾಕಾಶಕ್ಕೆ ಹಾರಲು ಸಜ್ಜಾಗಿದ್ದಾರೆ.

ಗಗನಯಾತ್ರಿಯನ್ನು ಒಳಗೊಂಡ ಬೋಯಿಂಗ್ ಸಂಸ್ಥೆಯ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆ ಮೂಲಕ ಅವರು ಬಾಹ್ಯಾಕಾಶಕ್ಕೆ ಹಾರಲಿದ್ದಾರೆ.

58 ವರ್ಷದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಹೊತ್ತು ಸ್ಟಾರ್‌ಲೈನರ್ ನೌಕೆ ಗಗನಕ್ಕೆ ಚಿಮ್ಮಲಿದೆ.

ಬೋಯಿಂಗ್ ಸಂಸ್ಥೆಯ ಬಹುದಿನಗಳ ಕಾಯುವಿಕೆಯು ನಾಳೆ ಅಂತ್ಯವಾಗಲಿದೆ.

ಅಮೆರಿಕದ ಸ್ಥಳೀಯ ಕಾಲಮಾನ ಸೋಮವಾರ ರಾತ್ರಿ 22.34(ಐಎಸ್‌ಟಿ ಮಂಗಳವಾರ ಬೆಳಿಗ್ಗೆ 8:04) ಸ್ಟಾರ್‌ಲೈನರ್ ನೌಕೆ ಉಡ್ಡಯನ ಆಗಲಿದೆ.

‘ನಾವೆಲ್ಲರೂ ಸಂಪೂರ್ಣ ಸಿದ್ಧವಾಗಿದ್ದೇವೆ. ನಮ್ಮ ಕುಟುಂಬ ಮತ್ತು ಗೆಳೆಯರಿಗೂ ಇದರ ಬಗ್ಗೆ ತಿಳಿದಿದೆ. ನಾವು ಈ ಬಗ್ಗೆ ಅವರ ಜೊತೆ ಮಾತನಾಡಿದ್ದೇವೆ. ಅವರು ಖುಷಿ ಮತ್ತು ಹೆಮ್ಮೆಯಿಂದಿದ್ದಾರೆ. ನಾನು ಈ ಯಾತ್ರೆಯ ಭಾಗವಾಗಿರುವುದಕ್ಕೆ ಹೆಮ್ಮೆಯಾಗುತ್ತಿದೆ’ ಎಂದು ಸುನಿತಾ ಹೇಳಿರುವುದಾಗಿ ಬಿಬಿಸಿ ವರದಿ ಮಾಡಿದೆ.

ಬೋಯಿಂಗ್‌ನ ಮಹತ್ವಾಕಾಂಕ್ಷಿ ಅಂತರಿಕ್ಷಯಾನ ಇದಾಗಿದ್ದು, ಗಗನನೌಕೆ ಅಭಿವೃದ್ಧಿಯಲ್ಲಿ ಹಲವು ತೊಡಕುಗಳು ಉಂಟಾದ ಕಾರಣ ಹಲವು ವರ್ಷಗಳ ಕಾಲ ಈ ಬಾಹ್ಯಾಕಾಶ ಯೋಜನೆ ಸ್ಥಗಿತವಾಗಿತ್ತು. ಈ ಯೋಜನೆ ಯಶಸ್ವಿಯಾದರೆ, ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಮಾನವ ಸಹಿತ ನೌಕೆ ಕಳುಹಿಸಿದ ಎರಡನೇ ಖಾಸಗಿ ಸಂಸ್ಥೆ ಎಂಬ ಹೆಗ್ಗಳಿಕೆಗೆ ಬೋಯಿಂಗ್ ಸಂಸ್ಥೆ ಪಾತ್ರವಾಗಲಿದೆ.

ಎಲಾನ್ ಮಸ್ಕ್ ಅವರ ‘ಸ್ಪೇಸ್‌ಎಕ್ಸ್’ ಸಂಸ್ಥೆ ಈ ಮೊದಲು ಐಎಸ್‌ಎಸ್‌ಗೆ ಗಗನನೌಕೆ ಉಡಾವಣೆ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.